ADVERTISEMENT

ಹಕ್ಕಿ ಡಿಕ್ಕಿ: ಪ್ರಯಾಣಿಕರು ಮತ್ತೊಂದು ವಿಮಾನದ ಮೂಲಕ ದೆಹಲಿಗೆ

ಪಿಟಿಐ
Published 27 ಸೆಪ್ಟೆಂಬರ್ 2022, 14:08 IST
Last Updated 27 ಸೆಪ್ಟೆಂಬರ್ 2022, 14:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಣ್ಣೂರು(ಕೇರಳ): ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಏರ್‌ ಇಂಡಿಯಾ ವಿಮಾನವೊಂದರ ಪ್ರಯಾಣಿಕರನ್ನು ಒಂದು ದಿನದ ಬಳಿಕ ಬೇರೊಂದು ವಿಮಾನದ ಮೂಲಕ ದೆಹಲಿಗೆ ಕಳುಹಿಸಲಾಗಿದೆ.

‘ಕೋಯಿಕ್ಕೋಡ್‌ನಿಂದ ದೆಹಲಿಗೆ ತೆರಳುತ್ತಿದ್ದವಿಮಾನದಲ್ಲಿ 135 ಮಂದಿ ಪ್ರಯಾಣಿಕರಿದ್ದರು, ಈ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಕಾರಣ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಮಂಗಳವಾರ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಕಣ್ಣೂರಿಗೆ ತಲುಪಿ ಈ ಪ್ರಯಾಣಿಕರನ್ನು ಕರೆದೊಯ್ದಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನದ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಕಾರಣ ಪ್ರಯಾಣಿಕರನ್ನು ಬೇರೊಂದು ವಿಮಾನದ ಮೂಲಕ ಕಳುಹಿಸಿಕೊಡಲಾಯಿತು’ ಎಂದೂ ತಿಳಿಸಿದ್ದಾರೆ.

ADVERTISEMENT

‘135 ಮಂದಿ ಪ್ರಯಾಣಿಕರ ಪೈಕಿ ಕೆಲವರು ಟಿಕೆಟ್‌ ರದ್ದುಗೊಳಿಸಿ ಬೇರೆ ವಿಮಾನದಲ್ಲಿ ತೆರಳಿದ್ದಾರೆ. 85 ಮಂದಿ ಪ್ರಯಾಣಿಕರಿಗೆ ಕಣ್ಣೂರಿನ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು’ ಎಂದು ಏರ್‌ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.