ADVERTISEMENT

ಕೋರೊನಿಲ್‌ ಮಾರಾಟಕ್ಕೆ ನಿರ್ಬಂಧ ಇಲ್ಲ: ಆಯುಷ್‌ ಸಚಿವಾಲಯ

ಪಿಟಿಐ
Published 1 ಜುಲೈ 2020, 22:39 IST
Last Updated 1 ಜುಲೈ 2020, 22:39 IST
ರಾಮ್‌ದೇವ್ 
ರಾಮ್‌ದೇವ್    

ಹರಿದ್ವಾರ/ನವದೆಹಲಿ: ಯೋಗಗುರು ರಾಮದೇವ್‌ ಪತಂಜಲಿ ಆಯುರ್ವೇದದಿಂದ ಬಿಡುಗಡೆಯಾದ ಕೋರೋನಿಲ್‌ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆಯುಷ್‌ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ.

ಒಂದು ಉತ್ಪನ್ನವಾಗಿ ಅದನ್ನು ಮಾರಾಟ ಮಾಡಬಹುದು. ಆದರೆ, ಕೋವಿಡ್‌ ನಿರ್ಮೂಲನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಾಗಿ ಮಾರಾಟ ಮಾಡಬಹುದು ಎಂದು ಸಚಿವಾಲಯವು ತಿಳಿಸಿದೆ.

ಈ ಹಿಂದೆ ಕೊರೊನಿಲ್‌ ಕೋವಿಡ್‌ನಿಂದ ಗುಣಮುಖ ಮಾಡಲು ಬಿಡುಗಡೆಯಾದ ಔಷಧವೆಂದೇ ಬಾಬಾ ರಾಮ್‌ದೇವ್‌ ಹೇಳಿಕೊಂಡಿದ್ದರು. ಆದರೆ, ಈಗ ಕೋವಿಡ್‌ ‌ರೋಗವನ್ನು ಸಮರ್ಪಕವಾಗಿ ನಿರ್ವಹಿಸುವ ಒಂದು ಉತ್ಪನ್ನ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್‌, ’ಕೋವಿಡ್‌ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಈ ಕೊರೊನಿಲ್‌ ಔಷಧವು ಒದಗಿಸುತ್ತದೆ. ಈ ಬಗ್ಗೆ ಸಚಿವಾಲಯವು ಮೆಚ್ಚುಗೆಯ ನುಡಿಗಳನ್ನಾಡಿದೆ. ದೇಶದ ಎಲ್ಲ ಕಡೆಗಳಲ್ಲಿಯೂ ಈ ಔಷಧ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.

ಹಲವು ಹಂತದ ಅನುಮೋದನೆಯ ನಂತರ ಈ ಔಷಧ ಸೇವನೆಯಿಂದ ಏಳು ದಿನಗಳಲ್ಲಿ ಕೋವಿಡ್‌ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.