
ನವದೆಹಲಿ: ‘ಇತರೆ ಚ್ಯವನಪ್ರಾಶ್ ಉತ್ಪನ್ನಗಳು ಕಳಪೆಯಾಗಿದ್ದು, ಜನರನ್ನು ವಂಚಿಸುತ್ತಿವೆ’ ಎಂದು ಹೇಳಿರುವ ಜಾಹೀರಾತನ್ನು ಪ್ರಸಾರ ಮಾಡದಂತೆ ಪತಂಜಲಿ ಆಯುರ್ವೇದ ಸಂಸ್ಥೆಗೆ ದೆಹಲಿ ಹೈಕೋರ್ಟ್ ಸೂಚಿಸಿದೆ. ಎಲ್ಲ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಂದ ಈ ಜಾಹೀರಾತನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ.
‘ಪತಂಜಲಿಯ ಉತ್ಪನ್ನಗಳು ಮಾತ್ರ ನೈಜವಾದವು. ಇತರೆ ಕಂಪನಿಗಳ ಉತ್ಪನ್ನಗಳು ವಂಚನೆ ಮಾಡುತ್ತಿವೆ ಎಂಬ ಸಂದೇಶವನ್ನು ಜಾಹೀರಾತಿನ ಮೂಲಕ ರವಾನಿಸಿರುವುದು ತಪ್ಪು. ಇದು ಇಡೀ ಚ್ಯವನಪ್ರಾಶ್ ಉತ್ಪನ್ನಗಳನ್ನು ಅವಹೇಳನ ಮಾಡುತ್ತದೆ’ ಎಂದು ಹೈಕೋರ್ಟ್ ಹೇಳಿದೆ.
ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ನೀಡಿರುವ ಅವಹೇಳನಕಾರಿ ಜಾಹೀರಾತಿನ ವಿರುದ್ಧ ತಡೆಯಾಜ್ಞೆ ಕೋರಿ ಡಾಬರ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.