ADVERTISEMENT

ರಾಜಕೀಯ ಅವಕಾಶವಾದಕ್ಕಾಗಿ ಜನರನ್ನು ವಿಭಜಿಸಲಾಗುತ್ತಿದೆ: ಅಮರ್ತ್ಯ ಸೇನ್‌

ಪಿಟಿಐ
Published 9 ಜುಲೈ 2022, 11:04 IST
Last Updated 9 ಜುಲೈ 2022, 11:04 IST
ಅಮರ್ತ್ಯ ಸೇನ್‌
ಅಮರ್ತ್ಯ ಸೇನ್‌   

ಕೋಲ್ಕತ್ತ: ರಾಜಕೀಯ ಅವಕಾಶವಾದಕ್ಕಾಗಿ ದೇಶದ ಜನರನ್ನು ವಿಭಜಿಸಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಶನಿವಾರ ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ಯ ಲಭಿಸಿ ದಶಕಗಳೇ ಕಳೆದರೂ ರಾಜಕೀಯ ಕಾರಣಕ್ಕಾಗಿ ಜನರನ್ನು ಬಂಧಿಸುವ ವಸಾಹತುಶಾಹಿ ಅಭ್ಯಾಸ ಮುಂದುವರಿದಿದೆ ಎಂದು ಅವರು ವಿಷಾದಿಸಿದರು.

ವರ್ಚುವಲ್‌ ಆಗಿ ನಡೆದ ‘ಆನಂದ ಬಜಾರ್‌ ಪತ್ರಿಕಾ’ದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜಕೀಯ ಲಾಭಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ಸಹಬಾಳ್ವೆಯಲ್ಲಿ ಬಿರುಕು ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

‘ನಾನು ಚಿಕ್ಕವನಿದ್ದಾಗ ರಾಜಕೀಯ ಕಾರಣಕ್ಕಾಗಿ ಹಲವು ಮಂದಿಯನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು. ಯಾವುದೇ ಅಪರಾಧ ಮಾಡದೆ ಜನರನ್ನು ಜೈಲಿಗೆ ಕಳುಹಿಸುವ ರೂಢಿ ಎಂದಾದರೂ ನಿಲ್ಲುತ್ತದೆಯೇ ಎಂದು ನಾನು ಆಗಾಗ ಪ್ರಶ್ನಿಸುತ್ತಿದ್ದೆ’ ಎಂದು ಅವರು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.