ADVERTISEMENT

ತಮಿಳುನಾಡು: ಮದ್ಯ ಮಾರಾಟ ಅಂಗಡಿಗಳೆದುರು ಚಪ್ಪಲಿ, ಛತ್ರಿ ಇಟ್ಟು ಜಾಗ ರಿಸರ್ವ್!

ಏಜೆನ್ಸೀಸ್
Published 16 ಮೇ 2020, 8:33 IST
Last Updated 16 ಮೇ 2020, 8:33 IST
ತಿರುಚಿರಾಪಳ್ಳಿಯಲ್ಲಿ ಮದ್ಯದ ಅಂಗಡಿಗಳ ಎದುರು ಚಪ್ಪಲಿ, ಛತ್ರಿ ಇಟ್ಟಿರುವ ಗ್ರಾಹಕರು
ತಿರುಚಿರಾಪಳ್ಳಿಯಲ್ಲಿ ಮದ್ಯದ ಅಂಗಡಿಗಳ ಎದುರು ಚಪ್ಪಲಿ, ಛತ್ರಿ ಇಟ್ಟಿರುವ ಗ್ರಾಹಕರು    

ತಿರುಚಿರಾಪಳ್ಳಿ: ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ್ದು, ಶನಿವಾರ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಜನರು ಮದ್ಯ ಮಾರಾಟ ಕೇಂದ್ರಗಳ ಎದುರು ತಮ್ಮ ಸಾಮಗ್ರಿಗಳನ್ನು ಇಟ್ಟು ಸ್ಥಳ ಕಾಯ್ದಿರಿಸಿಕೊಳ್ಳುತ್ತಿದ್ದಾರೆ.

ಮದ್ಯ ಮಾರಾಟ ಮಳಿಗೆಗಳ ಮುಂದೆ ದೊಡ್ಡ ಸಾಲು ಏರ್ಪಟ್ಟಿದೆ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಂಗಡಿಯಹೊರ ಭಾಗದಲ್ಲಿ ನಿರ್ದಿಷ್ಟ ಅಂತರದಲ್ಲಿ ವೃತ್ತಗಳನ್ನು ಹಾಕಲಾಗಿದೆ. ಆ ವೃತ್ತಗಳಲ್ಲಿ ಮದ್ಯ ಖರೀದಿಸಲು ಬಂದಿರುವವರು ಚಪ್ಪಲಿ, ಛತ್ರಿ, ಹೆಲ್ಮೆಟ್‌ಗಳನ್ನು ಇಟ್ಟು ಜಾಗ ಕಾಯ್ದಿಸಿಕೊಂಡಿದ್ದಾರೆ.

ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ಗ್ರಾಹಕರು ಮಳಿಗೆಗಳ ಹೊರಗೆ ಒಂದು ಮೀಟರ್‌ ಅಂತರ ಕಾಯ್ದುಕೊಂಡು ಸಾಲುಗಟ್ಟಿದ್ದಾರೆ.

ADVERTISEMENT

ಚೆನ್ನೈ, ತಿರುವಲ್ಲೂರ್‌ ಹಾಗೂ ಕೋವಿಡ್‌–19 ಹಾಟ್‌ಸ್ಪಾಟ್‌ ವಲಯಗಳನ್ನು ಹೊರತು ಪಡಿಸಿ ಉಳಿದೆಲ್ಲ ಭಾಗಗಳಲ್ಲಿ ಸರ್ಕಾರದ ಮದ್ಯ ಮಾರಾಟ ಟಿಎಎಸ್‌ಎಂಎಸಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಮದ್ಯ ಮಾರಾಟ ಮಳಿಗೆಗಳಲ್ಲಿ ಟೋಕನ್‌ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರ ಸೂಚಿಸಿದ್ದು, ದಿನಕ್ಕೆ ಗರಿಷ್ಠ 500 ಟೋಕನ್‌ಗಳನ್ನು ಮಾತ್ರ ವಿತರಿಸುವಂತೆ ಹೇಳಿದೆ. ಮದ್ಯ ಖರೀದಿಸಲು ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.