ADVERTISEMENT

ಮಾನವ ಹಕ್ಕುಗಳ ಉಲ್ಲಂಘನೆ: ಪೊಲೀಸರ ವಿರುದ್ಧವೇ ಹೆಚ್ಚು ದೂರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 18:42 IST
Last Updated 24 ಮಾರ್ಚ್ 2021, 18:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಬರುವ ದೂರುಗಳಲ್ಲಿ ಪೊಲೀಸರ ವಿರುದ್ಧದ ದೂರುಗಳೇ ಹೆಚ್ಚು. 2015-16ನೇ ಸಾಲಿನಿಂದ 2020-21ನೇ ಸಾಲಿನ ಫೆಬ್ರುವರಿ 28ರವರೆಗೆ ಮಾನವ ಹಕ್ಕುಗಳ ಉಲ್ಲಂಘನೆಯ 5 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇವುಗಳಲ್ಲಿ 1.4 ಲಕ್ಷಕ್ಕೂ ಹೆಚ್ಚು ದೂರು ಪೊಲೀಸರ ವಿರುದ್ಧವೇ ಬಂದಿವೆ. ಆದರೆ, 2015-16ಕ್ಕೆ ಹೋಲಿಸಿದರೆ ಈಗ ಪೊಲೀಸರ ವಿರುದ್ಧ ಬರುತ್ತಿರುವ ದೂರುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.

* 2019-20ನೇ ಸಾಲಿನಿಂದ ಶಾಲೆಗಳ ವಿರುದ್ಧವೂ ದೂರುಗಳು ದಾಖಲಾಗಿವೆ. 2019-20ರಲ್ಲಿ 499 ಮತ್ತು 2020-21ರಲ್ಲಿ 1,112 ದೂರುಗಳು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ವಿರುದ್ಧ ದಾಖಲಾಗಿವೆ.

* ಮಾಫಿಯಾ/ಭೂಗತ ಜಗತ್ತಿನ ವಿರುದ್ಧ ಬರುವ ದೂರುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ

ADVERTISEMENT

* ಮಹಿಳೆಯರಿಗೆ ಸಂಬಂಧಿಸಿದಂತೆ ಬರುವ ದೂರುಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ

ಉತ್ತರ ಪ್ರದೇಶದಲ್ಲಿ ಗರಿಷ್ಠ

ಆರು ವರ್ಷದಲ್ಲಿ ಉತ್ತರಪ್ರದೇಶಲ್ಲಿ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ. 5.23 ಲಕ್ಷ ದೂರುಗಳಲ್ಲಿ ಉತ್ತರ ಪ್ರದೇಶ ಒಂದರಲ್ಲೇ 2.03 ಲಕ್ಷ ಪ್ರಕರಣಗಳು ದಾಖಲಾಗಿವೆ. 2020-21ನೇ ಸಾಲಿನಲ್ಲೂ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ. ಈ ಸಾಲಿನಲ್ಲಿ ಹೆಚ್ಚು ದೂರು ದಾಖಲಾದ ರಾಜ್ಯಗಳ ವಿವರ ಹೀಗಿದೆ...

27,958 ಉತ್ತರ ಪ್ರದೇಶ

5,461 ದೆಹಲಿ

4,248 ತಮಿಳುನಾಡು

3,517 ಬಿಹಾರ

841 ಕರ್ನಾಟಕ

ಪೊಲೀಸರ ವಿರುದ್ಧದ ದೂರುಗಳ ಇಳಿಕೆ

ಆಧಾರ: ರಾಜ್ಯಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.