ADVERTISEMENT

ಮೇ ನಲ್ಲಿ 13 ನೇ ಬಾರಿ ತೈಲ ದರ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ₹100ಕ್ಕೆ ಸಮೀಪ

ಪಿಟಿಐ
Published 25 ಮೇ 2021, 5:49 IST
Last Updated 25 ಮೇ 2021, 5:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈ ತಿಂಗಳಲ್ಲಿ ದೇಶದಲ್ಲಿ 13ನೇ ಬಾರಿಗೆ ತೈಲ ದರ ಏರಿಕೆಯಾಗಿದ್ದು, ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ₹100ಕ್ಕೆ ಹತ್ತಿರವಾಗಿದೆ.

ಮಂಗಳವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 23 ಪೈಸೆ ಮತ್ತು ಡೀಸೆಲ್ 25 ಪೈಸೆ ಹೆಚ್ಚಳವಾಗಿದ್ದು,ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ₹99.71ಕ್ಕೆ ಹಾಗೂ ಡೀಸೆಲ್ ದರ ₹91.57ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹93.44ಕ್ಕೆ ಏರಿಕೆಯಾದರೆ, ಡೀಸೆಲ್ ದರ ₹84.32ಕ್ಕೆ ಏರಿದೆ.

ADVERTISEMENT

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ತೈಲ ಬೆಲೆಯು ₹100ರ ಗಡಿ ದಾಟಿದೆ. ಈ ಬಾರಿಯ ಹೆಚ್ಚಳದೊಂದಿಗೆ ಮುಂಬೈನಲ್ಲೂ ಪೆಟ್ರೋಲ್‌ ಬೆಲೆ ₹100ಕ್ಕೆ ಸಮೀಪವಾಗಿದೆ.

ರಾಜ್ಯಗಳ ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗುತ್ತದೆ. ದೇಶದಲ್ಲಿ ರಾಜಸ್ಥಾನವು ಪೆಟ್ರೋಲ್‌ ಮೇಲೆ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.

ದೇಶದಲ್ಲಿ ಮೇ 4ರಿಂದ 13 ಬಾರಿ ತೈಲ ದರ ಏರಿಕೆಯಾಗಿದೆ.ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ಕ್ರಮವಾಗಿ ₹104.42 ಮತ್ತು ₹97.18 ಇತ್ತು. ಇದೀಗ ಪೆಟ್ರೋಲ್‌ ಬೆಲೆಯಲ್ಲಿ ₹3.04 ಮತ್ತು ಡೀಸೆಲ್‌ ಬೆಲೆಯಲ್ಲಿ ₹3.59 ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.