ನವದೆಹಲಿ: ರಾಮ ಮಂದಿರ ಮಾದರಿಯಲ್ಲಿಯೇ ಇಲ್ಲಿ ಹೊಸ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದ ಕಾಮಗಾರಿ ಮುಂದಿನ ವರ್ಷ ಜೂನ್‌ನಲ್ಲಿ ಪೂರ್ಣಗೊಳ್ಳುವುದು ಎಂದು ಉತ್ತರ ರೈಲ್ವೆ ಹೇಳಿದೆ.
‘ರಾಮ ಜನ್ಮಭೂಮಿ ಎಂಬ ಕಾರಣಕ್ಕೆ ಈ ಸ್ಥಳಕ್ಕೆ ಮಹತ್ವ ಇದೆ. ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಉದ್ದೇಶ. ಅತ್ಯಾ ಧುನಿಕ ಪ್ರಯಾಣಿಕ ಸೌಲಭ್ಯಗಳ ಜೊತೆಗೆ ನಿಲ್ದಾಣದ ಸ್ವಚ್ಛತೆ, ಸೌಂದರ್ಯಕ್ಕೂ ಒತ್ತು ಒದಗಿಸಲಾಗುವುದು’ ಎಂದು ರೈಲ್ವೆಯ ಪ್ರಧಾನ ವ್ಯ ವಸ್ಥಾಪಕ ರಾಜೀವ್ ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.