ADVERTISEMENT

ಅಫ್ಗನ್‌ ಟಿ.ವಿ ನಿರೂಪಕ ಈಗ ಬೀದಿ ಬದಿ ವ್ಯಾಪಾರಿ: ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2022, 14:27 IST
Last Updated 16 ಜೂನ್ 2022, 14:27 IST
ಟಿ.ವಿ ನಿರೂಪಕ ಮೂಸಾ ಮೊಹಮ್ಮದಿ
ಟಿ.ವಿ ನಿರೂಪಕ ಮೂಸಾ ಮೊಹಮ್ಮದಿ   

ಕಾಬೂಲ್‌: ಅಫ್ಗಾನಿಸ್ತಾನದ ಮಾಜಿ ಟಿವಿ ನಿರೂಪಕ ಮೂಸಾ ಮೊಹಮ್ಮದಿ ಎಂಬುವವರು ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಚಿತ್ರಗಳನ್ನು ಹಮೀದ್ ಕರ್ಜೈ ನೇತೃತ್ವದ ಸರ್ಕಾರದಲ್ಲಿ ಕೆಲಸ ಮಾಡಿದ್ದ ಮಾಜಿ ಅಧಿಕಾರಿ, ಪತ್ರಕರ್ತ ಕಬೀರ್ ಹಕ್ಮಲ್ ಅವರು ಟ್ವಿಟರ್‌ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ.

’ಅಫ್ಗಾನಿಸ್ತಾನದಲ್ಲಿನ ಪತ್ರಕರ್ತರ ಬದುಕು ಇದು. ಮೌಸಾ ಮೊಹಮ್ಮದಿ ಅವರು ಸುದ್ದಿ ನಿರೂಪಕರಾಗಿ, ಪತ್ರಕರ್ತರಾಗಿ ವಿವಿಧ ವಾಹಿನಿಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ಈಗ ಅವರಿಗೆ ಅದಾಯವಿಲ್ಲ. ಹೀಗಾಗಿ ಬೀದಿಯಲ್ಲಿ ಆಹಾರ ಪದಾರ್ಥ ಮಾರಿ ಹಣ ಸಂಪಾದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಫ್ಗಾನಿಸ್ತಾನದಲ್ಲಿದ್ದ ಸರ್ಕಾರ ಪತನಗೊಂಡ ನಂತರ ಭೀಕರ ಬಡತನ ಕಾಡುತ್ತಿದೆ’ ಎಂದು ಹಕ್ಮಲ್‌ ಟ್ವೀಟ್‌ ಮಾಡಿದ್ದಾರೆ.

ಮೊಹಮ್ಮದಿ ಅವರ ಪರಿಸ್ಥಿತಿಯನ್ನು ವಿವರಿಸುವ ಟ್ವಿಟರ್ ಪೋಸ್ಟ್‌ ವೈರಲ್‌ ಆಗಿದೆ. ಅದು, ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನವನ್ನು ಸೆಳೆದಿದೆ. ಮೊಹಮ್ಮದಿ ಅವರನ್ನು ತಮ್ಮ ಸಂಸ್ಥೆಗೆ ನೇಮಿಸಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.