ADVERTISEMENT

ಪೈಲೆಟ್‌ ನಿರ್ಲಕ್ಷ್ಯದಿಂದಲೇ ಪಾಕಿಸ್ತಾನದ ವಿಮಾನ ಪತನ

ಪಿಟಿಐ
Published 23 ಜೂನ್ 2020, 14:21 IST
Last Updated 23 ಜೂನ್ 2020, 14:21 IST
ಪತನಗೊಂಡ ವಿಮಾನ 
ಪತನಗೊಂಡ ವಿಮಾನ    

ಇಸ್ಲಾಮಾಬಾದ್‌: ಕಳೆದ ತಿಂಗಳು ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ (ಪಿಐಎ) ವಿಮಾನ ಪತನಗೊಳ್ಳುವುದಕ್ಕೆ ಪೈಲೆಟ್‌ಗಳು ಹಾಗೂ ಏರ್‌ ಕಂಟ್ರೋಲ್‌ ಟವರ್‌ (ಎಟಿಸಿ) ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ ಹೊರತು ತಾಂತ್ರಿಕ ಸಮಸ್ಯೆಯಲ್ಲ ಎಂದು ಪ್ರಾಥಮಿಕ ತನಿಖಾ ವರದಿಯಿಂದ ಬಹಿರಂಗವಾಗಿದೆ.

ತನಿಖಾ ವರದಿಯಂತೆ, ಪೈಲೆಟ್‌ಗಳು ಹಾಗೂ ಎಟಿಸಿ ಸಿಬ್ಬಂದಿ ಹಲವು ತಪ್ಪುಗಳನ್ನು ಮಾಡಿದ್ದರು. ಯಾವುದೇ ತಾಂತ್ರಿಕ ಸಮಸ್ಯೆಯ ಬಗ್ಗೆ ಉಲ್ಲೇಖವಾಗಿರುವುದು ಬ್ಲ್ಯಾಕ್‌ಬಾಕ್ಸ್‌ನಲ್ಲಿ ದಾಖಲಾಗಿಲ್ಲ. ಪೈಲೆಟ್‌ ಮೊದಲ ಬಾರಿಗೆ ವಿಮಾನವನ್ನು ಇಳಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿಮಾನದ ವೇಗ, ಎತ್ತರವು ನಿಗದಿಗಿಂತ ಅಧಿಕವಾಗಿತ್ತು. ಈ ಸಂದರ್ಭದಲ್ಲಿ 9 ಸಾವಿರ ಮೀಟರ್‌ ಉದ್ದದ ರನ್‌ವೇಯ ಮಧ್ಯದಲ್ಲಿ ವಿಮಾನ ಇಳಿದಿತ್ತು.

ವೇಗ ಹಾಗೂ ಎತ್ತರ ನಿಗದಿಗಿಂತ ಅಧಿಕವಾಗಿದ್ದರೂ, ವಿಮಾನ ಇಳಿಯಲು ಕಂಟ್ರೋಲ್‌ ಟವರ್ ಒಪ್ಪಿಗೆ ನೀಡಿತ್ತು. ಲ್ಯಾಂಡಿಂಗ್‌ ಗೇರ್‌ ಸಮಸ್ಯೆಯ ಕುರಿತೂ ಪೈಲೆಟ್‌ ಕಂಟ್ರೋಲ್‌ ಟವರ್‌ಗೆ ಮಾಹಿತಿ ನೀಡಿರಲಿಲ್ಲ. ಎರಡನೇ ಬಾರಿ ಇಳಿಸುವ ಸಂದರ್ಭದಲ್ಲಿ ವಿಮಾನ 17 ನಿಮಿಷಗಳ ಕಾಲ ಹಾರಾಡಿತ್ತು. ಈ ಸಮಯದಲ್ಲಿ ವಿಮಾನದ ಎರಡೂ ಎಂಜಿನ್‌ಗಳು ನಿಷ್ಕ್ರಿಯವಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ADVERTISEMENT

ಮೇ 22ರಂದುಲಾಹೋರ್‌ನಿಂದಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ವಿಮಾನ ಆಗಮಿಸುತ್ತಿತ್ತು.ವಿಮಾನ ನಿಲ್ದಾಣಕ್ಕೆಸಮೀಪದ ಮಾಡೆಲ್‌ ಕಾಲೊನಿಯಲ್ಲಿ ವಿಮಾನ ಪತನಗೊಂಡಿತ್ತು.ಘಟನೆಯಲ್ಲಿ 97 ಜನರು ಮೃತಪಟ್ಟಿದ್ದರು. ಇಬ್ಬರು ಪವಾಡಸದೃಶ್ಯ ರೀತಿಯಲ್ಲಿ ಬದುಕಿದ್ದರು.

ಘಟನೆ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದ ಸರ್ಕಾರ, ಪ್ರಾಥಮಿಕ ವರದಿಯನ್ನು ಜೂನ್‌ 22ರಂದು ಸಂಸತ್‌ನಲ್ಲಿ ಮಂಡಿಸುವುದಾಗಿ ತಿಳಿಸಿತ್ತು. ಆದರೆ ವಿಮಾನಯಾನ ಸಚಿವ ಘುಲಮ್‌ ಸರ್ವಾರ್‌ ಖಾನ್‌ ತನಿಖಾ ವರದಿಯನ್ನು ಸಂಸತ್‌ನಲ್ಲಿ ಮಂಡಿಸುವ ಬದಲಾಗಿ, ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.