ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಾಸಗಿ ಗಣಿ ಕಂಪನಿ ಸಿಎಂಆರ್‌ಎಲ್‌ನಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆಂದು ಆರೋಪಿಸಿ, ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೋಟಿಸ್ ನೀಡಿ, ಪ್ರತಿಕ್ರಿಯೆ ಕೇಳಿದೆ.
ಪತ್ರಕರ್ತ ಎಂ.ಆರ್.ಅಜಯನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಮಿತ್ ರಾವಲ್ ಮತ್ತು ಪಿ.ಎಂ.ಮನೋಜ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್, ಸದ್ಯ ಕಾರ್ಯಸ್ಥಗಿತಗೊಂಡಿರುವ ಅವರ ಐಟಿ ಕಂಪನಿ ಎಕ್ಸಾಲಾಜಿಕ್, ಖಾಸಗಿ ಗಣಿ ಕಂಪನಿ ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶಶಿಧರನ್ ಕಾರ್ತ, ಅವರ ಪುತ್ರ, ಪುತ್ರಿ, ಅಳಿಯ ಮತ್ತು ಸೆಬಿ ಸೇರಿದಂತೆ ಹಲವರಿಗೂ ಕೋರ್ಟ್ ನೋಟಿಸ್ ನೀಡಿದೆ.
ಸಿಎಂಆರ್‌ಎಲ್‌ನ(ಕೊಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್) ಆದಾಯ ತೆರಿಗೆ ಪ್ರಕ್ರಿಯೆಯಲ್ಲಿ ನಮೂದಿಸಿದ್ದವರ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ‘ಮಧ್ಯಂತರ ಇತ್ಯರ್ಥ ಮಂಡಳಿ’ಗೂ ಸೂಚಿಸಿ, ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.