ADVERTISEMENT

ಇ–ಕಾಮರ್ಸ್‌ ತಾಣಗಳ ಪ್ರತಿಕ್ರಿಯೆ, ಕೇಂದ್ರದ ಪ್ರತಿಕ್ರಿಯೆಗೆ ಹೈಕೋರ್ಟ್ ನೋಟಿಸ್‌

ಪಿಟಿಐ
Published 1 ಜುಲೈ 2020, 8:23 IST
Last Updated 1 ಜುಲೈ 2020, 8:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇ–ಕಾಮರ್ಸ್‌ ತಾಣಗಳಲ್ಲಿ ಮಾರಾಟ ಮಾಡಲಾಗುವ ಉತ್ಪನ್ನದ ಮಾಹಿತಿಯಲ್ಲಿ ಉತ್ಪಾದಕ ದೇಶದ ಹೆಸರನ್ನು ಪ್ರದರ್ಶಿಸಲುಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡುವಂತೆಕೇಂದ್ರ ಸರ್ಕಾರಕ್ಕೆದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.

ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್‌ ಜಲಾನ್‌ ಅವರ ಪೀಠ,ಇದೇ 22ರೊಳಗೆ ಪ್ರತಿಕ್ರಿಯಿಸುವಂತೆಕೇಂದ್ರ ಸರ್ಕಾರ ಸೇರಿದಂತೆ ಇ–ಕಾಮರ್ಸ್ತಾಣಗಳಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸ್ನಾಪ್‌‌ಡೀಲ್‌ಗೆ ನೋಟಿಸ್‌ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT