ನವದೆಹಲಿ: ಮೂಢನಂಬಿಕೆ, ವಾಮಾಚಾರ ಹಾಗೂ ಉಡುಗೊರೆ, ಆರ್ಥಿಕ ನೆರವು ನೀಡುವ ಮೂಲಕ ನಡೆಯುವ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ಬಿಜೆಪಿ ನಾಯಕರೂ ಆಗಿರುವ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಪಿಐಎಲ್ ಸಲ್ಲಿಸಿದ್ದು, ‘ಧರ್ಮದ ದುರುಪಯೋಗ’ ತಡೆಗೆ ಧಾರ್ಮಿಕ ಮತಾಂತರ ಕಾಯ್ದೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸುವ ಸಾಧ್ಯತೆಯ ಬಗ್ಗೆಯೂ ನಿರ್ದೇಶನ ನೀಡಬೇಕು ಎಂದುಕೋರಿದ್ದಾರೆ.
‘ಹೇಗಾದರೂ ಮಾಡಿ ಧಾರ್ಮಿಕ ಮತಾಂತರಕ್ಕೆ ಮುಂದಾಗುವುದುಸಂವಿಧಾನದ 14, 21, 25ನೇ ವಿಧಿಗಳ ಉಲ್ಲಂಘನೆ ಆಗುತ್ತದೆ. ಅಲ್ಲದೆ ಅದು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿರುವ ಜಾತ್ಯತೀತ ತತ್ವಗಳಿಗೂ ವಿರುದ್ಧವಾಗಿದೆ. ಮೂಢನಂಬಿಕೆ, ವಾಮಾಚಾರದ ಜತೆಯಲ್ಲಿ ಧಾರ್ಮಿಕ ಮತಾಂತರವನ್ನು ತಡೆಗಟ್ಟುವುದು ಸಹ ರಾಜ್ಯಗಳ ಕರ್ತವ್ಯವಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.