ADVERTISEMENT

ಕೇದಾರನಾಥ ಹೆಲಿಕಾಪ್ಟರ್‌ ಪತನ: ಜೈಪುರದಲ್ಲಿ ಪೈಲಟ್ ಅಂತ್ಯಕ್ರಿಯೆ

ಪಿಟಿಐ
Published 17 ಜೂನ್ 2025, 13:26 IST
Last Updated 17 ಜೂನ್ 2025, 13:26 IST
,
,   

ಜೈಪುರ: ಕೇದಾರನಾಥ ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟ ಪೈಲಟ್‌ ರಾಜ್‌ವೀರ್‌ ಸಿಂಗ್‌ ಚೌಹಾಣ್‌ ಅವರ ಅಂತಿಮಸಂಸ್ಕಾರವನ್ನು ಜೈಪುರದಲ್ಲಿ ಮಂಗಳವಾರ ನೆರವೇರಿಸಲಾಯಿತು.

ಇದಕ್ಕೂ ಮುನ್ನ ಚೌಹಾಣ್‌ ಅವರ ಪತ್ನಿ ಲೆಫ್ಟಿನೆಂಟ್ ಕರ್ನಲ್‌ ದೀಪಿಕಾ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಅಸಂಖ್ಯಾತ ಜನರು, ಕುಟುಂಬಸ್ಥರು, ಬಂಧು–ಮಿತ್ರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಚೌಹಾಣ್‌ ಅವರು 15 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದರು. 2024ರಿಂದ ಆರ್ಯನ್‌ ಏವಿಯೇಷನ್ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಪೈಲಟ್‌ ಆಗಿ ಕೆಲಸ ಮಾಡುತ್ತಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.