ADVERTISEMENT

ಸೋನಿಯಾ ಭೇಟಿಯಾಗಿದ್ದ ಚಿನ್ನ ಕಳ್ಳತನ ಆರೋಪಿಗಳು: ಕಾಂಗ್ರೆಸ್‌ ಟೀಕಿಸಿದ ಪಿಣರಾಯಿ

ಪಿಟಿಐ
Published 25 ಡಿಸೆಂಬರ್ 2025, 15:26 IST
Last Updated 25 ಡಿಸೆಂಬರ್ 2025, 15:26 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿನ ಚಿನ್ನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಗಳು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರುವ ಫೋಟೊ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಉಲ್ಲೇಖಿಸಿದ್ದಾರೆ. 

ಆರೋಪಿಗಳಾದ ಬೆಂಗಳೂರಿನ ಉದ್ಯಮಿ ಉಣ್ಣಿಕೃಷ್ಣನ್‌ ಪೋಟಿ ಹಾಗೂ ಬಳ್ಳಾರಿಯ ಆಭರಣ ವ್ಯಾಪಾರಿ ಗೋವರ್ಧನ್‌ ಅವರು ಸೋನಿಯಾ ಅವರನ್ನು ಭೇಟಿಯಾಗಿರುವ ಫೋಟೊವು ವ್ಯಾಪಕವಾಗಿ ಹರಿದಾಡುತ್ತಿದೆ ಎಂದು ವಿಜಯನ್‌ ಹೇಳಿದ್ದಾರೆ. 

ಚಿತ್ರದಲ್ಲಿ ಕಾಂಗ್ರೆಸ್‌ ಸಂಸದರಾದ ಅಡೂರ್‌ ಪ್ರಕಾಶ್‌ ಮತ್ತು ಅಂಟೋ ಆಂಟೋನಿ ಅವರೂ ಇದ್ದು, ಇದನ್ನು 2019ರಲ್ಲಿ ತೆಗೆದಿರಬಹುದು ಎನ್ನಲಾಗಿದೆ. 

ADVERTISEMENT

‘ಆರೋಪಿಗಳು ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಿ’ ಎಂದು ವಿಜಯನ್‌ ಅವರು ಕಾಂಗ್ರೆಸ್‌ ನಾಯಕರನ್ನು ಕೇಳಿದ್ದಾರೆ. 

ವಿಶೇಷ ತನಿಖಾ ತಂಡವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.