ADVERTISEMENT

ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಿತ್ತರಿಸಲು ಕೇಂದ್ರ ಸೂಚನೆ

ಪಿಟಿಐ
Published 28 ಡಿಸೆಂಬರ್ 2021, 14:08 IST
Last Updated 28 ಡಿಸೆಂಬರ್ 2021, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶಿಯ ವಿಮಾನಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಬಿತ್ತರಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಮಂಗಳವಾರ ಸೂಚಿಸಿದೆ.

ದೇಶಿಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಭಾರತೀಯ ಸಂಗೀತವನ್ನು ಪ್ರಚಾರ ಮಾಡಬೇಕು ಎಂದು ಡಿಸೆಂಬರ್‌ 23 ರಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರಿಗೆಭಾರತೀಯಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್‌) ಮನವಿ ಮಾಡಿತ್ತು.

ಈ ಸಂಬಂಧ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಪತ್ರ ಬರೆದಿರುವ ಸಚಿವಾಲಯವು,‘ಜಗತಿನಾದ್ಯಂತ ವಿವಿಧ ವಿಮಾನಯಾನ ಸಂಸ್ಥೆಗಳು ತಮ್ಮ ದೇಶಕ್ಕೆ ಸೇರಿದ ಸಂಗೀತವನ್ನು ತಮ್ಮ ವಿಮಾನಗಳಲ್ಲಿ ಬಿತ್ತರಿಸುತ್ತದೆ. ಉದಾಹರಣೆಗೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಜ್ಯಾಸ್‌ ಸಂಗೀತವನ್ನು ಪ್ರಸಾರ ಮಾಡಿದರೆ, ಮಧ್ಯ ಪೂರ್ವ ದೇಶಗಳ ವಿಮಾನಯಾನ ಸಂಸ್ಥೆಗಳು ಅರಬ್‌ ಸಂಗೀತವನ್ನು ಬಿತ್ತರಿಸುತ್ತದೆ’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.