ಚಾದರ ಹಸ್ತಾಂತರಿಸಿದ ಪ್ರಧಾನಿ ಮೋದಿ
– ಎಕ್ಸ್ ಚಿತ್ರ
ನವದೆಹಲಿ: ಅಜ್ಮೀರ್‌ನ ಖಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ‘ಉರುಸ್’ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಅಲ್ಲದೆ ದರ್ಗಾಕ್ಕೆ ಹಾಸಲು ‘ಚಾದರ್’ ಅನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಹಸ್ತಾಂತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚಾದರವನ್ನು ದರ್ಗಾಕ್ಕೆ ಅರ್ಪಿಸಲಾಗುತ್ತದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದೀಕ್ ಅವರಿಗೆ ಚಾದರ ನೀಡುವ ಚಿತ್ರವನ್ನು ಎಕ್ಸ್‌ನಲ್ಲಿ ಪ್ರಧಾನಿ ಹಂಚಿಕೊಂಡಿದ್ದಾರೆ.
‘ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಶುಭಾಶಯಗಳು. ಈ ಸಂದರ್ಭವು ಎಲ್ಲರ ಬಾಳಲ್ಲಿ ಶಾಂತಿ ಹಾಗೂ ಸುಖವನ್ನು ತರಲಿ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
ಇದು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ, ಸಾಮರಸ್ಯ ಮತ್ತು ಸಹಾನುಭೂತಿಯ ನಿರಂತರ ಸಂದೇಶದ ಬಗ್ಗೆ ಅವರಿಗಿರುವ ಆಳವಾದ ಗೌರವದ ಪ್ರತೀಕ ಎಂದು ಮೋದಿ ಬರೆದುಕೊಂಡಿದ್ದಾರೆ
ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಾವಿನ ವರ್ಷಾಚರಣೆಯ ಅಂಗವಾಗಿ ಅಜ್ಮೀರ್‌ನಲ್ಲಿ ಉರುಸ್ ನಡೆಸಲಾಗುತ್ತದೆ. ಕಳೆದ 10 ವರ್ಷದಿಂದಲೂ ಪ್ರಧಾನಿ ಮೋದಿ ಚಾದರ್ ಅರ್ಪಿಸುತ್ತಲೇ ಬಂದಿದ್ದಾರೆ.
ಇತ್ತೀಚೆಗಷ್ಟೇ ಹಿಂದೂ ಸಂಘನೆಯೊಂದು, ದರ್ಗಾದ ಅಡಿಯಲ್ಲಿ ದೇಗುಲವಿದೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ಅದಕ್ಕೆ ತಡೆ ಬಿದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.