ADVERTISEMENT

ಕಚ್ಚತೀವು | ತಮಿಳುನಾಡಿನ ಆಗ್ರಹದ ಬಗ್ಗೆ ಮೋದಿ ನಿರ್ಲಕ್ಷ್ಯ: ಸ್ಟಾಲಿನ್‌

ಪಿಟಿಐ
Published 7 ಏಪ್ರಿಲ್ 2025, 11:15 IST
Last Updated 7 ಏಪ್ರಿಲ್ 2025, 11:15 IST
ಸ್ಟಾಲಿನ್‌
ಸ್ಟಾಲಿನ್‌   

ಚೆನ್ನೈ: ‘ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವ ಮತ್ತು ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ತಮಿಳುನಾಡಿನ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಭೇಟಿಯ ವೇಳೆ ನಿರ್ಲಕ್ಷಿಸಿದ್ದಾರೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ವಿಧಾನಸಭೆ ಅಧಿವೇಶನದಲ್ಲಿ ಹೇಳಿದರು.

‘ಮೀನುಗಾರರನ್ನು ಹಾಗೂ ಅವರ ಬೋಟುಗಳನ್ನು ಬಿಡಿಸುವ ಬಗ್ಗೆ ಪ್ರಧಾನಿ ಮೋದಿ ಅವರು ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮ ಆಗ್ರಹವನ್ನು ನಿರ್ಲಕ್ಷಿಸಿದ್ದು ವಿಷಾದನೀಯ ಮತ್ತು ನಿರಾಶಾದಾಯಕ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನಿ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದ ಬಳಿಕ 14 ಮೀನುಗಾರರನ್ನು ಬಿಡುಗಡೆ ಮಾಡಲಾಯಿತು. ಆದರೂ ಮೀನುಗಾರರ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ಲಕ್ಷ್ಯ ಧೋರಣೆಯೇ ಇದೆ. ಆದರೆ, ನಾವು ಮೀನುಗಾರರ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ’ ಎಂದರು.

ADVERTISEMENT

ಇದೇ ವೇಳೆ, ರಾಮೇಶ್ವರದಲ್ಲಿರುವ ತಂಗಚ್ಚಿಮದಂ ಬಂದರು ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಸ್ಟಾಲಿನ್‌ ಘೋಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.