ADVERTISEMENT

ಕರ್ತಾರ್‌ಪುರದಲ್ಲಿ ಐಕ್ಯತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 9:15 IST
Last Updated 9 ನವೆಂಬರ್ 2019, 9:15 IST
   

ನವದೆಹಲಿ: ಭಾರತ–ಪಾಕಿಸ್ತಾನ ಬಾಂಧವ್ಯ ಬೆಸೆಯುವ ಕರ್ತಾರ್‌ಪುರ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಸಿಖ್‌ರ ಧರ್ಮಗುರು ನಾನಕ್‌ ಅವರ 550 ನೇ ಜಯಂತಿಗೂ ಒಂದು ದಿನ ಮೊದಲು ಕರ್ತಾರ್‌ಪುರ ಕಾರಿಡಾರ್‌ ಲೋಕಾರ್ಪಣೆ ಮಾಡುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ನೆರೆದಿದ್ದ ಸಾವಿರಾರು ಯಾತ್ರಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
⦁ ಗುರುನಾನಕ್‌ ಅವರಬೋಧನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ.
⦁ ಗುರುನಾನಕ್‌ ಅವರು ಏಕತೆಯ ಸಂದೇಶ ಸಾರಿದ್ದರು.
⦁ ಇನ್ನು ಮುಂದೆ ಕರ್ತಾರ್‌ಪುರದ ದರ್ಬಾರ್‌ ಸಾಹೀಬ್‌ ಗುರುದ್ವಾರಕ್ಕೆ ಎಲ್ಲ ಯಾತ್ರಿಗಳಿಗೂ ಪ್ರವೇಶ ದೊರೆಯಲಿದೆ
⦁ ಪೌರತ್ವ ತಿದ್ದುಪಡಿ ಕಾಯ್ದೆ ಸಿಖ್ಖರಿಗೆ ಸಹಾಯ ಮಾಡಲಿದೆ
⦁ ಜಮ್ಮು–ಕಾಶ್ಮೀರದಲ್ಲಿ 370 ವಿಧಿಯನ್ನು ತೆರವುಗೊಳಿಸಿದ ನಂತರ ಅಲ್ಲಿನ ಸಿಖ್‌ರಿಗೆ ಸಮಾನ ಹಕ್ಕುಗಳು ಸಿಕ್ಕಿವೆ
⦁ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ
⦁ ಭಾರತೀಯರ ಭಾವನೆಗಳನ್ನು ಗೌರವಿಸಿದ ಇಮ್ರಾನ್‌ ಖಾನ್‌ ಅವರಿಗೆ ಧನ್ಯವಾದ ಹೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT