ADVERTISEMENT

ಉತ್ತರಾಖಂಡಕ್ಕೆ ಪ್ರಧಾನಿ ಮೋದಿ ಭೇಟಿ; ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಪಿಟಿಐ
Published 12 ಅಕ್ಟೋಬರ್ 2023, 5:21 IST
Last Updated 12 ಅಕ್ಟೋಬರ್ 2023, 5:21 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ಪಿಥೋರಗಢ: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಪಿಥೋರಗಢ ಜಿಲ್ಲೆಯ ಜೋಲಿಂಗ್‌ಕಾಂಗ್‌ಗೆ ಪ್ರದಾನಿ ಮೋದಿ ಆಗಮಿಸಿದ್ದು, ಆದಿ-ಕೈಲಾಶ ದೇವರ ದರ್ಶನ ಪಡೆದಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ದೇವಭೂಮಿ ಉತ್ತರಾಖಂಡದ ಪ್ರತಿಯೊಬ್ಬರ ಮತ್ತು ರಾಜ್ಯದ ತ್ವರಿತ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಬದ್ಧವಾಗಿದೆ. ಇದಕ್ಕೆ ಮತ್ತಷ್ಟು ವೇಗ ನೀಡಲು ಪಿಥೋರಗಢದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ಗಡಿ ಗ್ರಾಮವಾದ ಗುಂಜಿಯಲ್ಲಿ ಸ್ಥಳೀಯರೊಂದಿಗೆ ಮೋದಿ ಸಂವಾದವನ್ನು ನಡೆಸಲಿದ್ದಾರೆ.

ಗುಂಜಿ ಗ್ರಾಮದಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದೇನೆ. ಈ ಪ್ರವಾಸದಲ್ಲಿ ಆಧ್ಮಾತ್ಮಿಕ ಮಹತ್ವದ ಪಾರ್ವತಿ ಕುಂಡದ ದರ್ಶನ ಮತ್ತು ಜಾಗೇಶ್ವರ ಧಾಮದಲ್ಲಿ ಪೂಜೆ ನಡೆಸುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.