ADVERTISEMENT

ಮೆಲೋಡಿ ಮೀಮ್‌ ಹರಿದಾಟ: ಅದು ನಡೆಯುತ್ತಿರುತ್ತೆ, ತಲೆ ಕೆಡಿಸಿಕೊಳ್ಳಲ್ಲ– PM ಮೋದಿ

ಪಿಟಿಐ
Published 11 ಜನವರಿ 2025, 11:23 IST
Last Updated 11 ಜನವರಿ 2025, 11:23 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ತೆಗೆದುಕೊಂಡು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಹಂಚಿಕೊಂಡಿದ್ದ ಸೆಲ್ಫಿ </p></div>

ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ತೆಗೆದುಕೊಂಡು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಹಂಚಿಕೊಂಡಿದ್ದ ಸೆಲ್ಫಿ

   

–ಪಿಟಿಐ ಚಿತ್ರ

ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ಚಿತ್ರ, ತುಣುಕುಗಳನ್ನೊಳಗೊಂಡ ಮೀಮ್‌ಗಳ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂಥವು ನಡೆಯುತ್ತಿರುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಂಡು ಸಮಯ ಹಾಳು ಮಾಡುವುದಿಲ್ಲ’ ಎಂದಿದ್ದಾರೆ.

ADVERTISEMENT

ತಮ್ಮ ಚೊಚ್ಚಲ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರಿಗೆ ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ಮೆಲೋನಿ ಕುರಿತು ಸುತ್ತಿ ಬಳಸಿ ಪ್ರಶ್ನೆ ಕೇಳಿದ್ದಾರೆ.

‘ನನ್ನ ಇಷ್ಟದ ಆಹಾರ ಫಿಜ್ಜಾ. ಅದರ ಮೂಲ ಇಟಲಿ. ಜನರು ಆ ರಾಷ್ಟ್ರದ ಕುರಿತು ತುಂಬಾ ಮಾತನಾಡುತ್ತಾರೆ. ಇಟಲಿ ಕುರಿತು ಏನನ್ನಾದರೂ ಹೇಳಬಹುದೇ? ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮೀಮ್‌ಗಳ ಕುರಿತು ಏನನ್ನುತ್ತೀರಿ?’ ಎಂದು ನಿಖಿಲ್ ಕೇಳಿದ್ದಾರೆ.

ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಮೋದಿ, ‘ನಹಿ, ಓ ಥೋ ಚಲ್ತಾ ರಹ್ತಾ ಹೈ (ಇಲ್ಲ, ಅಂಥವು ನಡೆಯುತ್ತಲೇ ಇರುತ್ತವೆ), ‘ಮೇ ಉಸ್ಮೆ ಅಪ್ನಾ ಟೈಂ ಖರಾಬ್‌ ನಹಿ ಕರ್ತಾ (ಇಂಥ ವಿಷಯಗಳಲ್ಲಿ ನಾನು ನನ್ನ ಸಮಯ ವ್ಯರ್ಥ ಮಾಡುವುದಿಲ್ಲ) ಎಂದಿದ್ದಾರೆ. 

ಮೆಲೋನಿ ಕುರಿತು ಹೆಚ್ಚು ವಿಷಯ ಹಂಚಿಕೊಳ್ಳದ ಮೋದಿ, ನಾನು ಆಹಾರ ಪ್ರಿಯನಲ್ಲ. ಹೊರದೇಶದಲ್ಲಿ ನನಗೆ ಏನು ನೀಡುತ್ತಾರೋ ನಾನು ಅದನ್ನು ಸೇವಿಸುತ್ತೇನೆ. ಮೆನು ಓದಿಕೊಂಡು ಏನು ಬೇಕೆಂದು ನಿರ್ಧರಿಸುವುದು ನನಗೆ ಕಷ್ಟ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಹೊರದೇಶಗಳಲ್ಲಿ ಆಹಾರ ಆರ್ಡರ್‌ ಮಾಡುವಾಗ ಅರುಣ್‌ ಜೇಟ್ಲಿ ನನಗೆ ನೆರವಾಗುತ್ತಿದ್ದರು. ಅಲ್ಲಿದ್ದ ಒಂದೇ ಷರತ್ತು ಎಂದರೆ, ಅದು ಶಾಕಾಹಾರಿಯಾಗಿರಬೇಕು ಎಂಬುದಷ್ಟೇ ಎಂದಿದ್ದಾರೆ.

ಎಂದಾದರೂ ವ್ಯಾಕುಲತೆ ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ನಾನು ಭಾವನೆಗಳಿಂದ ಹೊರಬಂದಿದ್ದೇನೆ. ನಾನು ಈಗ ಏನಿದ್ದೇನೋ ಅದಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಈ ಸ್ಥಾನದಲ್ಲಿರುವಾಗ ಭಾವನೆಗಳಿಗೆ ಜಾಗವಿಲ್ಲ. ಮನುಷ್ಯರ ನಿಸರ್ಗದತ್ತ ಗುಣವೇ ಭಾವನೆ. ನಾನು ಅದನ್ನು ಮೀರಿ ಬೆಳೆಯಬೇಕು’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.