ADVERTISEMENT

ಮೋದಿ ಪ್ರೊಫೈಲ್ ಚಿತ್ರವಾಗಿ ತಿರಂಗ: ಪ್ರತಿಯೊಬ್ಬರೂ ಅನುಕರಿಸುವಂತೆ ಪ್ರಧಾನಿ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2022, 6:59 IST
Last Updated 2 ಆಗಸ್ಟ್ 2022, 6:59 IST
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್‌ ಖಾತೆಯ ಪ್ರೊಫೈಲ್‌ ಚಿತ್ರವನ್ನು ತಿರಂಗಕ್ಕೆ ಬದಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್‌ ಖಾತೆಯ ಪ್ರೊಫೈಲ್‌ ಚಿತ್ರವನ್ನು ತಿರಂಗಕ್ಕೆ ಬದಲಿಸಿದ್ದಾರೆ.    

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಚಿತ್ರವಾಗಿ ತಿರಂಗವನ್ನು ಬಳಸಿದ್ದಾರೆ. ಎಲ್ಲಾ ಭಾರತೀಯರೂ ಹೀಗೇ ಮಾಡಬೇಕಾಗಿ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ. ‘ಇಂದು ಆಗಸ್ಟ್ 2ರ ವಿಶೇಷ. ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಮಯದಲ್ಲಿ ರಾಷ್ಟ್ರವು ನಮ್ಮ ತ್ರಿವರ್ಣ ಧ್ವಜವನ್ನು ಸಂಭ್ರಮಿಸುವ ಸಾಮೂಹಿಕ ಆಂದೋಲನವಾದ ‘ಪ್ರತಿ ಮನೆಯಲ್ಲೂ ತಿರಂಗ (ಹರ್‌ಘರ್‌ ತಿರಂಗ)’ಕ್ಕೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಚಿತ್ರವನ್ನು ಬದಲಾಯಿಸಿದ್ದೇನೆ. ನೀವೂ ಹೀಗೇ ಮಾಡಬೇಕು ಎಂದು ನಾನು ಆಗ್ರಹಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.

ADVERTISEMENT

ಕಳೆದ ಭಾನುವಾರ ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಅವರು ಆ. 2ರಿಂದ 15ರ ವರೆಗೆ ದೇಶದ ನಾಗರಿಕರೆಲ್ಲರೂ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಚಿತ್ರವಾಗಿ ತಿರಂಗವನ್ನು ಬಳಸಬೇಕಾಗಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.