ADVERTISEMENT

ಭಾರತ ಬ್ರಿಕ್ಸ್‌ಗೆ ಬದ್ಧ: 5 ರಾಷ್ಟ್ರಗಳ ಪ್ರವಾಸ ಆರಂಭಿಸಿದ ಮೋದಿ ಹೇಳಿಕೆ

ಪಿಟಿಐ
Published 2 ಜುಲೈ 2025, 4:38 IST
Last Updated 2 ಜುಲೈ 2025, 4:38 IST
ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸ ಆರಂಭ
ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸ ಆರಂಭ   

ನವದೆಹಲಿ: ಬ್ರೆಜಿಲ್ ಸೇರಿದಂತೆ ಐದು ದೇಶಗಳಿಗೆ ಒಂದು ವಾರದ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಉದಯೋನ್ಮುಖ ಆರ್ಥಿಕತೆಗಳ ನಡುವಿನ ಸಹಕಾರಕ್ಕಾಗಿ ಭಾರತ ಬ್ರಿಕ್ಸ್‌ಗೆ ಬದ್ಧವಾಗಿದೆ ಎಂದು ಬುಧವಾರ ಹೇಳಿದ್ದಾರೆ. ಬ್ರೆಜಿಲ್‌ನಲ್ಲಿ ಅವರು ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಒಟ್ಟಾಗಿ ನಾವು ಹೆಚ್ಚು ಶಾಂತಿಯುತ, ಸಮಾನ, ನ್ಯಾಯಯುತ, ಪ್ರಜಾಪ್ರಭುತ್ವ ಮತ್ತು ಸಮತೋಲಿತ ಬಹುಧ್ರುವೀಯ ವಿಶ್ವದ ವ್ಯವಸ್ಥೆಗಾಗಿ ಶ್ರಮಿಸುತ್ತೇವೆ’ಎಂದು ಅವರು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರದಲ್ಲಿ ಪ್ರಧಾನಿ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ.

ADVERTISEMENT

ಘಾನಾಗೆ ನನ್ನ ಮೊದಲ ಪ್ರವಾಸವಾಗಿದ್ದು, ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರ ಆಹ್ವಾನದ ಮೇರೆಗೆ ಜುಲೈ 2 ಮತ್ತು 3 ರಂದು ಅಲ್ಲಿಗೆ ಭೇಟಿ ನೀಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.

ಘಾನಾ ಜಾಗತಿಕ ದಕ್ಷಿಣದಲ್ಲಿ ಮೌಲ್ಯಯುತ ಪಾಲುದಾರ ದೇಶವಾಗಿದ್ದು, ಆಫ್ರಿಕನ್ ಒಕ್ಕೂಟ ಮತ್ತು ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಎರಡೂ ದೇಶಗಳ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಹೂಡಿಕೆ, ಇಂಧನ, ಆರೋಗ್ಯ, ಭದ್ರತೆ, ಸಾಮರ್ಥ್ಯ ವೃದ್ಧಿ ಹಾಗೂ ಅಭಿವೃದ್ಧಿ ಪಾಲುದಾರಿಕೆ ಸೇರಿದಂತೆ ಸಹಕಾರದ ಹೊಸ ಆಯಾಮಗಳ ಕುರಿತು ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರವಾದ ಘಾನಾ ಸಂಸತ್ತಿನಲ್ಲಿ ಮಾತನಾಡುವುದು ಗೌರವದ ಸಂಗತಿ ಎಂದು ಅವರು ಹೇಳಿದ್ದಾರೆ.

ಘಾನಾಗೆ ಭೇಟಿ ನೀಡಿದ ನಂತರ ಮುಂದಿನ ಎರಡು ದಿನಗಳವರೆಗೆ, ಅವರು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಇರುತ್ತಾರೆ. ಇದು ಭಾರತವು ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರ-ಜನರ ಸಂಪರ್ಕವನ್ನು ಹೊಂದಿರುವ ದೇಶವಾಗಿದೆ.

ಈ ವರ್ಷದ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲೂ ಮತ್ತು ಇತ್ತೀಚೆಗೆ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಕಮಲಾ ಪರ್ಸಾದ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.