ADVERTISEMENT

ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ: ಪಾಲ್ಗೊಳ್ಳುವುದು ಹೇಗೆ?

ಪಿಟಿಐ
Published 17 ಸೆಪ್ಟೆಂಬರ್ 2025, 11:02 IST
Last Updated 17 ಸೆಪ್ಟೆಂಬರ್ 2025, 11:02 IST
<div class="paragraphs"><p>ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ</p></div>

ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ

   

ಪಿಟಿಐ ಚಿತ್ರಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ಉಡುಗೊರೆಗಳ ಇ– ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ADVERTISEMENT

ಭವಾನಿ ದೇವಿಯ ವಿಗ್ರಹ, ಅಯೋಧ್ಯೆ ರಾಮ ಮಂದಿರದ ಮಾದರಿ, 2024ರ ಒಲಿಂಪಿಕ್ಸ್‌ ಆಟಗಳ ಸ್ಮರಣಿಕೆಗಳು ಸೇರಿದಂತೆ 1,300ಕ್ಕೂ ಉಡುಗೊರೆಗಳ ಹರಾಜನ್ನು ಮೋದಿ ಅವರ ಜನ್ಮದಿನವಾದ ಸೆ.17ರಂದು ಆರಂಭಿಸಲಾಗಿದೆ. ಅ.2ರವರೆಗೆ ನಡೆಯಲಿದೆ.

ಪ್ರಧಾನ ಮಂತ್ರಿಗಳ ಸ್ಮರಣಿಕೆ ವೆಬ್‌ಸೈಟ್ ಪ್ರಕಾರ, ಭವಾನಿ ದೇವಿಯ ವಿಗ್ರಹದ ಬೆಲೆ ₹1,03,95,000 ಆಗಿದ್ದು, ರಾಮ ಮಂದಿರದ ಮಾದರಿಯೊಂದರ ಬೆಲೆ ₹5.5 ಲಕ್ಷ ಆಗಿದೆ. 

ಈ ವಸ್ತುಗಳ ಜತೆಗೆ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಮೂರು ಜೊತೆ ಶೂಗಳನ್ನು ಹರಾಜಿಗೆ ಇಡಲಾಗಿದೆ. ಪ್ರತಿ ಶೂನ ಮೂಲ ಬೆಲೆ ₹7.7 ಲಕ್ಷ ಇರಲಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ ಶಾಲು, ರಾಮ ದರ್ಬಾರ್‌ ಚಿತ್ರಿಸಿರುವ ತಂಜಾವೂರು ಪೇಂಟಿಂಗ್‌, ಲೋಹಗಳ ನಟರಾಜನ ವಿಗ್ರಹ, ಗುಜರಾತ್‌ನ ರೋಗನ್ ಕಲೆ ಸೇರಿದಂತೆ ಹಲವು ಉಡುಗೊರೆಗಳು ಹರಾಜು ಪಟ್ಟಿಯಲ್ಲಿವೆ. 

2019ರಲ್ಲಿ ಮೊದಲ ಬಾರಿಗೆ ಪ್ರಧಾನಿಯವರ ಉಡುಗೊರೆಗಳನ್ನು ಇ–ಹರಾಜು ನಡೆಸಲಾಗಿತ್ತು. ಸಾವಿರಾರು ಉಡುಗೊರೆಗಳನ್ನು ಹರಾಜು ಮಾಡಲಾಗಿದ್ದು, ಈವರೆಗೆ ₹50 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಅದನ್ನು ‘ನಮಾಮಿ ಗಂಗಾ ಯೋಜನೆ’ಗೆ ವಿನಿಯೋಗಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಇ–ಹರಾಜಿನಲ್ಲಿ ಪಾಲ್ಗೊಳ್ಳುವುದು ಹೇಗೆ?

ನೀವೇನಾದರೂ ಪ್ರಧಾನ ಮಂತ್ರಿಗಳ ಉಡುಗೊರೆಗಳ ಹರಾಜಿನಲ್ಲಿ ಪಾಲ್ಗೊಳ್ಳಬೇಕೆಂದರೆ, 

  • ಮೊದಲು www.pmmementos.gov.in. ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಿ

  • ನೋಂದಣಿ ಬಳಿಕ ನಿಮಗೆ ಹರಾಜಿಗಿರುವ ವಸ್ತುಗಳು ಕಾಣುತ್ತವೆ

  • ನಿಮ್ಮ ಖರೀದಿಸಬೇಕೆಂದಿರುವ ವಸ್ತುವಿಗೆ ಬಿಡ್‌ ನಮೂದಿಸಿ.

  • ನೀವೇ ಅಧಿಕ ಬಿಡ್‌ದಾರರಾದರೆ ಪ್ರಧಾನಿ ಮೋದಿ ಅವರಿಗೆ ಸಂದಾಯವಾದ ಆ ವಸ್ತು ನಿಮ್ಮದಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.