ADVERTISEMENT

ವಿದ್ಯಾರ್ಥಿ ಮತ್ತು ಪೋಷಕರ ವರ್ಚುವಲ್‌ ಸಭೆಯಲ್ಲಿ ಪಿಎಂ ಮೋದಿ ದಿಢೀರ್‌ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 4:48 IST
Last Updated 4 ಜೂನ್ 2021, 4:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಶಿಕ್ಷಣ ಸಚಿವಾಲಯ ಗುರುವಾರ ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಆಯೋಜಿಸಿದ್ದ ವರ್ಚುವಲ್‌ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್‌ ಪ್ರತ್ಯಕ್ಷರಾದರು.

ವಿದ್ಯಾರ್ಥಿಗಳ ಹವ್ಯಾಸಗಳು ಮತ್ತು ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳ ಜತೆ ಪ್ರಧಾನಿ ಸಮಾಲೋಚನೆ ನಡೆಸಿದರು. 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿರುವುದಕ್ಕೆ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಪ್ರಧಾನಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಪ್ರಧಾನಿ ಜತೆ ಮಾತನಾಡಿದ ಬೆಂಗಳೂರಿನ ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಅಭಿರಾಮ್‌, ‘ಅಧ್ಯಯನದ ಜತೆ ಪ್ರತಿ ದಿನ 30 ನಿಮಿಷ ಯೋಗ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಇನ್ನೊಬ್ಬ ವಿದ್ಯಾರ್ಥಿ ನಂದನ್ ಹೆಗಡೆ, ‘12ನೇತರಗತಿ ಪರೀಕ್ಷೆ ರದ್ದು ಮಾಡಿರುವುದು ಸ್ವಾಗತಾರ್ಹ ಕ್ರಮ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಇದೊಂದೇ ಕೊನೆಯ ಪರೀಕ್ಷೆ ಅಲ್ಲ. ಇನ್ನೂ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಆರೋಗ್ಯವೇ ಮುಖ್ಯ’ ಎಂದು ಹೇಳಿದರು. ಕೆಲವು ಪೋಷಕರು ಕಾಲೇಜು ಪ್ರವೇಶದ ಬಗ್ಗೆಯೂ ಸಭೆಯಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.