ADVERTISEMENT

1ಗಂಟೆ 43 ನಿಮಿಷ PM ಮೋದಿ ಭಾಷಣ; ದಾಖಲೆ | ಅತಿ ಕಡಿಮೆ ಸಮಯ ಭಾಷಣ ಮಾಡಿದ PM ಯಾರು?

ಪಿಟಿಐ
Published 15 ಆಗಸ್ಟ್ 2025, 4:56 IST
Last Updated 15 ಆಗಸ್ಟ್ 2025, 4:56 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ (103 ನಿಮಿಷ) ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನಿಸಿಕೊಂಡಿದ್ದಾರೆ.

ADVERTISEMENT

ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದಿದ್ದ ಮೋದಿ, ಈ ಬಾರಿ 103 ನಿಮಿಷಗಳ ಕಾಲ ಮಾತನಾಡುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

2024ರ ಮೊದಲು ಮೋದಿ ಅವರ ದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 2016 ರಲ್ಲಿ ಆಗಿತ್ತು (96 ನಿಮಿಷಗಳು). 2017ರಲ್ಲಿ 56 ನಿಮಿಷಗಳ ಕಾಲ ಭಾಷಣ ಮಾಡಿದ್ದರು.

ಮೋದಿಗಿಂತ ಮೊದಲು, 1947ರಲ್ಲಿ ಜವಾಹರಲಾಲ್ ನೆಹರು 72 ನಿಮಿಷ ಮತ್ತು 1997 ರಲ್ಲಿ ಐ.ಕೆ. ಗುಜ್ರಾಲ್ 71 ನಿಮಿಷ ದೀರ್ಘ ಭಾಷಣ ಮಾಡಿದ್ದರು.

1954ರಲ್ಲಿ ನೆಹರೂ ಮತ್ತು 1966 ರಲ್ಲಿ ಇಂದಿರಾ ಗಾಂಧಿ ಇಬ್ಬರೂ ಕ್ರಮವಾಗಿ 14 ನಿಮಿಷ ಮಾತನಾಡಿದ್ದರು. ಇದು ದಾಖಲೆಯ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿತ್ತು.

ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕೂಡ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಅತ್ಯಂತ ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ್ದರು.

2012 ಮತ್ತು 2013 ರಲ್ಲಿ ಸಿಂಗ್ ಅವರ ಭಾಷಣಗಳು ಕ್ರಮವಾಗಿ 32 ಮತ್ತು 35 ನಿಮಿಷಗಳ ಕಾಲ ಮಾತ್ರ ನಡೆದಿತ್ತು. 2002 ಮತ್ತು 2003 ರಲ್ಲಿ ವಾಜಪೇಯಿ ಅವರ ಭಾಷಣ ಇನ್ನೂ ಕಡಿಮೆ, ಅಂದರೆ 25 ಮತ್ತು 30 ನಿಮಿಷಗಳಿಗೆ ಅಂತ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.