ADVERTISEMENT

ದೆಹಲಿ-ಮೀರತ್ ಆರ್​ಆರ್​ಟಿಎಸ್ ಕಾರಿಡಾರ್​ಗೆ ಇಂದು ಪ್ರಧಾನಿ ಮೋದಿ ಚಾಲನೆ

ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಪ್ರಾರಂಭ- ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕಿಸುವ ರಾಪಿಡ್‌ ಎಕ್ಸ್ ರೈಲು ಸಂಚಾರಕ್ಕೆ ಇಂದು ಪ್ರಧಾನಿ ಹಸಿರು ನಿಶಾನೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2023, 6:21 IST
Last Updated 20 ಅಕ್ಟೋಬರ್ 2023, 6:21 IST
<div class="paragraphs"><p>ರ‍್ಯಾಪಿಡ್‌ಎಕ್ಸ್</p></div>

ರ‍್ಯಾಪಿಡ್‌ಎಕ್ಸ್

   

-ಚಿತ್ರ ಕೃಪೆ ಎಕ್ಸ್‌

ನವದೆಹಲಿ: ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್​ ಶುಕ್ರವಾರ (ಅ.20) ಉದ್ಘಾಟನೆಗೊಳ್ಳಲಿದೆ. ಭಾರತದ ಮೊದಲ ಇಂಟರ್‌ಸಿಟಿ ‘ರ‍್ಯಾಪಿಡ್‌ಎಕ್ಸ್’ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಸಾಹಿಬಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ಮೊದಲ 17 ಕಿ.ಮೀ ದೂರದ ವಿಭಾಗವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ ಐದು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿದೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅವುಗಳಲ್ಲಿ ಮೂರು ಕಾರಿಡಾರ್‌ಗಳನ್ನು ದೆಹಲಿ- ಘಾಜಿಯಾಬಾದ್-ಮೀರತ್ ಕಾರಿಡಾರ್ ಸೇರಿದಂತೆ ಹಂತ-1 ರಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ 17 ಕಿ.ಮೀ ಆದ್ಯತೆಯ ಮಾರ್ಗವು ಉದ್ಘಾಟನೆಗೊಳ್ಳಲಿದ್ದು, ಅದು ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಗಾಜಿಯಾಬಾದ್, ಗುಲ್ಧಾರ್ ಮತ್ತು ದುಹೈ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ದೆಹಲಿ-ಘಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಅಡಿಪಾಯ ಹಾಕಿದ್ದರು. ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಅನ್ನು ₹30 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.