ನವದೆಹಲಿ: ಜಮ್ಮುವಿನ ಕಟ್ರಾ ಹಾಗೂ ಶ್ರೀನಗರ ನಡುವಿನ ಮೊದಲ ರೈಲು ಸಂಚಾರಕ್ಕೆ ಇದೇ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ.
ಈ ಮಾರ್ಗವು ದೇಶದ ರೈಲ್ವೆ ಜಾಲಕ್ಕೆ ಕಾಶ್ಮೀರ ಕಣಿವೆಯನ್ನು ನೇರವಾಗಿ ಸಂಪರ್ಕಿಸಲಿದೆ.
ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಕಮಾನು ಸೇತುವೆಯನ್ನು ಇದೇ ದಿನದಂದು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ 30 ಸಾವಿರ ಟನ್ ಉಕ್ಕು ಬಳಸಲಾಗಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ರಾ– ಶ್ರೀನಗರದ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದ್ದು, ಆರರಿಂದ ಏಳು ತಾಸಿನ ಪ್ರಯಾಣದ ಅವಧಿ ಮೂರು ತಾಸುಗಳಿಗೆ ಇಳಿಯಲಿದೆ. ಈ ಮಾರ್ಗದಲ್ಲಿ ಸಂಚರಿಸಲಿಕ್ಕಾಗಿಯೇ ವಂದೇ ಭಾರತ್ ರೈಲನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.