ADVERTISEMENT

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಭಾರತ ಪ್ರವಾಸ ಇಂದಿನಿಂದ

ಪಿಟಿಐ
Published 16 ಫೆಬ್ರುವರಿ 2026, 16:42 IST
Last Updated 16 ಫೆಬ್ರುವರಿ 2026, 16:42 IST
ಇಮ್ಯಾನ್ಯುವೆಲ್‌ ಮ್ಯಾಕ್ರನ್‌
ಇಮ್ಯಾನ್ಯುವೆಲ್‌ ಮ್ಯಾಕ್ರನ್‌   

ನವದೆಹಲಿ: ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಅವರ ಮೂರು ದಿನಗಳ ಭಾರತ ಪ್ರವಾಸ ಮಂಗಳವಾರದಿಂದ ಆರಂಭವಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಮ್ಯಾಕ್ರನ್‌ ಅವರ ನಡುವೆ ಮುಂಬೈನಲ್ಲಿ ದ್ವಿಪಕ್ಷೀಯ ಮಾತುಕತೆ ಮಂಗಳವಾರ ನಡೆಯಲಿದೆ. ಈ ವೇಳೆ ಇಬ್ಬರೂ ನಾಯಕರು, ಭಾರತ– ಫ್ರಾನ್ಸ್‌ ನಡುವಿನ ಕಾರ್ಯತಂತ್ರ ಪಾಲುಗಾರಿಕೆಯ ಪ್ರಗತಿ ಕುರಿತು ಚರ್ಚಿಸಲಿದ್ದಾರೆ.

ಮೋದಿ ಅವರ ಆಹ್ವಾನದ ಮೇರೆಗೆ ಮ್ಯಾಕ್ರನ್‌ ಅವರು ಎಐ ಶೃಂಗದಲ್ಲೂ ಭಾಗವಹಿಸಲಿದ್ದಾರೆ. ಅಲ್ಲದೆ ಮುಂಬೈನಲ್ಲಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಶೃಂಗವೂ ನಡೆಯಲಿದೆ. ಈ ವೇಳೆ ಕೆಲ ಮಹತ್ವದ ಒಡಂಬಡಿಕೆಗಳಿ ಸಹಿ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಮ್ಯಾಕ್ರನ್‌ ಅವರು ಭಾರತಕ್ಕೆ ನಾಲ್ಕನೇ ಬಾರಿ ಬರುತ್ತಿದ್ದು, ಮುಂಬೈಗೆ ಅವರ ಮೊದಲ ಭೇಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.