ADVERTISEMENT

ಸಿಕಂದರಾಬಾದ್-ವಿಶಾಖಪಟ್ಟಣ ‌ವಂದೇ ಭಾರತ್‌ಗೆ ಪ್ರಧಾನಿ ಚಾಲನೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 14:22 IST
Last Updated 14 ಜನವರಿ 2023, 14:22 IST
..
..   

ಹೈದರಾಬಾದ್‌ (ಪಿಟಿಐ): ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ನಡುವೆ ವಂದೇ ಭಾರತ್ ರೈಲು ಓಡಾಟ ಭಾನುವಾರ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.

ಎಕ್ಸ್‌ಪ್ರೆಸ್‌ ರೈಲು ಬೆಳಿಗ್ಗೆ 5.45 ಕ್ಕೆ ವಿಶಾಖಪಟ್ಟಣದಿಂದ ಹೊರಟು ಮಧ್ಯಾಹ್ನ 2.15 ಕ್ಕೆ ಸಿಕಂದರಾಬಾದ್ ತಲುಪಲಿದೆ. ಸಿಕಂದರಾಬಾದ್‌ನಿಂದ ಮಧ್ಯಾಹ್ನ 3 ಕ್ಕೆ ಹೊರಟು ರಾತ್ರಿ 11.30ಕ್ಕೆ ವಿಶಾಖಪಟ್ಟಣ ತಲುಪಲಿದೆ. ರಾಜಮಂಡ್ರಿ, ವಿಜಯವಾಡ, ಖಮ್ಮಂ ಮತ್ತು ವಾರಂಗಲ್‌ಗಳಲ್ಲಿ ನಿಲುಗಡೆ ಇರಲಿದೆ ಎಂದು ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

14 ಎಸಿ ಚೇರ್ ಕಾರ್ ಬೋಗಿಗಳು ಮತ್ತು ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಬೋಗಿಗಳನ್ನು ಒಳಗೊಂಡಿದ್ದು, 1,128 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.