ADVERTISEMENT

ಕರ್ತವ್ಯ ಪಥ ಕುರಿತ ಚಿಕ್ಕ ‘ನಕಾಶೆ‘ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಪಿಟಿಐ
Published 18 ಮೇ 2023, 15:58 IST
Last Updated 18 ಮೇ 2023, 15:58 IST
(Twitter/@M_Lekhi)
(Twitter/@M_Lekhi)   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥದ ಕುರಿತಾದ ಚಿಕ್ಕ ನಕಾಶೆಯನ್ನು (ಪ್ಯಾಕೆಟ್‌ ಮ್ಯಾಪ್‌) ಗುರುವಾರ ಬಿಡುಗಡೆ ಮಾಡಿದ್ದಾರೆ.

ಇಂಡಿಯಾ ಗೇಟ್‌ ಸಂಕೀರ್ಣದಲ್ಲಿ ಇರುವ ವಿವಿಧ ರಾಜ್ಯಗಳಿಗೆ ಸಂಬಂಧಿಸಿದ ಭವನಗಳು ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ಸಂಸ್ಥೆಗಳ ಕುರಿತಾದ ಮಾಹಿತಿಯನ್ನು ಇದು ಒಳಗೊಂಡಿರಲಿದೆ. 

ಪ್ರಗತಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ಸಮ್ಮೇಳನದ ಉದ್ಘಾಟನೆ ವೇಳೆ ಮೋದಿ ಅವರು ಈ ನಕಾಶೆಯನ್ನು ಅನಾವರಣಗೊಳಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.