ADVERTISEMENT

ಜೋ ಬೈಡನ್, ಕಮಲಾ ಹ್ಯಾರಿಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಪಿಟಿಐ
Published 8 ನವೆಂಬರ್ 2020, 3:09 IST
Last Updated 8 ನವೆಂಬರ್ 2020, 3:09 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕಾಗಿ ಜೋ ಬೈಡನ್ ಅವರನ್ನು ಹಾಗೂ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

‘ಜೋ ಬೈಡನ್ ಅವರೇ, ಅದ್ಭುತ ಗೆಲುವಿಗಾಗಿ ಅಭಿನಂದನೆಗಳು. ಉಪಾಧ್ಯಕ್ಷರಾಗಿದ್ದಾಗ ಭಾರತ–ಅಮೆರಿಕ ಬಾಂಧವ್ಯ ಗಟ್ಟಿಗೊಳಿಸುವುದಕ್ಕೆ ನಿಮ್ಮ ಕೊಡುಗೆ ನಿರ್ಣಾಯಕ ಮತ್ತು ಅಮೂಲ್ಯವಾದದ್ದಾಗಿತ್ತು. ಜತೆಯಾಗಿ ಕೆಲಸ ಮಾಡುವ ಮೂಲಕ ಭಾರತ–ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಎದುರುನೋಡುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳು. ನಿಮ್ಮ ಅದ್ಭುತ ಯಶಸ್ಸು ನಿಮ್ಮ ಬೆಂಬಲಿಗರಿಗಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ಅಮೆರಿಕನ್ನರಿಗೂ ಹೆಮ್ಮೆಯ ವಿಷಯ. ನಿಮ್ಮ ಬೆಂಬಲ ಮತ್ತು ನಾಯಕತ್ವದೊಂದಿಗೆ ಭಾರತ–ಅಮೆರಿಕ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುವ ವಿಶ್ವಾಸವಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.