ADVERTISEMENT

ಈ ವೇಗಕ್ಕೆ ತಡೆಯೊಡ್ಡೋದು ಬೇಡ: ಮನ್ ಕೀ ಬಾತ್‌ನಲ್ಲಿ ಮೋದಿ ಹೇಳಿದ್ದರ ಮರ್ಮವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 7:32 IST
Last Updated 29 ಆಗಸ್ಟ್ 2021, 7:32 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಈ ಬಾರಿ ದೇಶದ ಕ್ರೀಡಾಪಟುಗಳ ಸಾಧನೆ, ಸ್ವಚ್ಛ ಭಾರತ ಅಭಿಯಾನ, ಆತ್ಮ ನಿರ್ಭರ ಭಾರತ... ಹೀಗೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಿಂಗಳ ರೇಡಿಯೊ ಕಾರ್ಯಕ್ರಮ ‘ಮನದ ಮಾತು (ಮನ್ ಕೀ ಬಾತ್‌)’ವಿನಲ್ಲಿ ಭಾನುವಾರ ಪ್ರಸ್ತಾವಿಸಿದ್ದಾರೆ.

ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವ ಪ್ರಮುಖಾಂಶಗಳು ಇಲ್ಲಿವೆ:

ADVERTISEMENT

* ಈಗಿನ ವೇಗ ಕುಂಠಿತವಾಗಲು ನಾವು ಬಿಡಬಾರದು. ಹಳ್ಳಿಗಳು, ಪಟ್ಟಣಗಳು, ನಗರಗಳಲ್ಲಿ ನಮ್ಮ ಕ್ರೀಡಾ ಮೈದಾನಗಳು ತುಂಬಿರಬೇಕು. ಸರ್ವರ ಒಳಗೊಳ್ಳುವಿಕೆಯಿಂದ ಮಾತ್ರ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೇರಬಲ್ಲದು.

* ಈ ವರ್ಷ ನಾವು ಒಲಿಂಪಿಕ್ಸ್‌ ಹಾಕಿಯಲ್ಲಿ 40 ವರ್ಷಗಳ ಬಳಿಕ ಪದಕ ಜಯಿಸಿದೆವು. ಮೇಜರ್ ಧ್ಯಾನ್‌ಚಂದ್ ಅವರಿದ್ದಿದ್ದರೆ ಇಂದು ಎಷ್ಟು ಖುಷಿಪಡುತ್ತಿದ್ದರು ಎಂದು ಊಹಿಸಬಲ್ಲಿರಾ... ನಾವು ಇಂದು ಯುವಕರಲ್ಲಿ ಕ್ರೀಡೆಯೆ ಕುರಿತ ಪ್ರೀತಿಯನ್ನು ಕಾಣುತ್ತಿದ್ದೇವೆ. ಕ್ರೀಡೆಗಳ ಮೇಲಿನ ಈ ತುಡಿತವು ಮೇಜರ್ ಧ್ಯಾನ್ ಚಂದ್ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವವಾಗಿದೆ.

* ಕಳೆದ ಹಲವು ವರ್ಷಗಳಿಂದ ಮಧ್ಯ ಪ್ರದೇಶದ ಇಂದೋರ್ ನಗರವು ‘ಸ್ವಚ್ಛತಾ’ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಈಗ, ಇಂದೋರ್ ಜನರು ತಮ್ಮ ನಗರವನ್ನು ‘ವಾಟರ್ ಪ್ಲಸ್ ಸಿಟಿ (ನದಿ ಮತ್ತು ಜನಮೂಲಗಳ ಸ್ವಚ್ಛತೆಗಾಗಿ ನೀಡಲಾಗುವ ಪ್ರಮಾಣಪತ್ರ ಪಡೆದ ನಗರ)’ ಮಾಡಲು ನಿರ್ಧರಿಸಿದ್ದಾರೆ. ‘ವಾಟರ್ ಪ್ಲಸ್’ ನಗರಗಳ ಸಂಖ್ಯೆಯೊಂದಿಗೆ ಸ್ವಚ್ಛತೆ ಸುಧಾರಿಸಲಿದೆ.

* ದೇಶದಲ್ಲಿ ಸ್ಟಾರ್ಟ್‌ ಅಪ್ ಸಂಸ್ಕತಿ ಹೆಚ್ಚಾಗುತ್ತಿದೆ. ಸಣ್ಣಪುಟ್ಟ ನಗರಗಳಲ್ಲಿಯೂ ಯುವಕರು ನವೋದ್ಯಮ ಚಟುವಟಿಕೆ ಆರಂಭಿಸುತ್ತಿದ್ದಾರೆ. ಇದು ದೇಶದ ಉಜ್ವಲ ಭವಿಷ್ಯದ ಸಂಕೇತವಾಗಿದೆ.

*ಮುಂದಿನ ದಿನಗಳಲ್ಲಿ ‘ವಿಶ್ವಕರ್ಮ ಜಯಂತಿ’ ಆಚರಿಸಲಾಗುವುದು. ನಮ್ಮಿಲ್ಲಿ, ಭಗವಾನ್ ವಿಶ್ವಕರ್ಮರನ್ನು ವಿಶ್ವದ ಹುಟ್ಟಿನ ಹಿಂದಿನ ಸೃಜನಶೀಲ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ.

*ವಿಶ್ವಕರ್ಮ ದೇವರು ಸೃಜನಶೀಲ ಶಕ್ತಿಯ ಸಂಕೇತವಾಗಿದ್ದಾರೆ. ಈ ಸಂಕೇತವುಪ್ರಪಂಚದಲ್ಲಿ ಅಭಿವೃದ್ಧಿ ಮತ್ತು ಹೊಸತನಕ್ಕೆ ಕಾರಣವಾಗುತ್ತದೆ.

* ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು: ಪ್ರಧಾನಿ ಮನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.