ADVERTISEMENT

ಗುರುಗೋವಿಂದ್‌ ಸಿಂಗ್‌ 354ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ ಗೌರವ

ಪಿಟಿಐ
Published 20 ಜನವರಿ 2021, 5:29 IST
Last Updated 20 ಜನವರಿ 2021, 5:29 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಗುರುಗೋವಿಂದ್‌ ಸಿಂಗ್‌ ಅವರ354ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗೌರವ ನಮನ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ನಾನು ಗುರುಗೋವಿಂದ್‌ ಅವರಿಗೆ ತಲೆ ಬಾಗುತ್ತೇನೆ. ಅವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು‘ ಎಂದಿದ್ದಾರೆ.

‘ಗುರುಗೋವಿಂದ್ ಸಿಂಗ್‌ ಅವರು ತಮ್ಮ ತತ್ವಗಳನ್ನು ಅಚಲವಾಗಿ ಎತ್ತಿ ಹಿಡಿದರು. ಅವರ ಧೈರ್ಯ ಮತ್ತು ತ್ಯಾಗಗಳನ್ನು ನಾವು ಸದಾ ಸ್ಮರಿಸುತ್ತೇವೆ’ ಎಂದು ಅವರು ಹೇಳಿದರು. ಇದರೊಂದಿಗೆ ಮೋದಿ, ಗುರು ಗೋವಿಂದ್‌ ಸಿಂಗ್‌ ಅವರ ಬಗೆಗಿನ ವಿಡಿಯೊದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ADVERTISEMENT

ಗುರುಗೋವಿಂದ್‌ ಸಿಂಗ್‌ ಅವರು 10ನೇ ಸಿಖ್‌ ಗುರುಗಳಾಗಿದ್ದಾರೆ. ಅವರು ತತ್ವಶಾಸ್ತ್ರಜ್ಞ, ಕವಿ ಮತ್ತು ದಾರ್ಶನಿಕರಾಗಿ ಖ್ಯಾತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.