ADVERTISEMENT

ಸರ್ದಾರ್‌ ಪಟೇಲ್‌ಗೆ ಗೌರವ ಸಲ್ಲಿಸಿದ ಮೋದಿ

ಪಿಟಿಐ
Published 31 ಅಕ್ಟೋಬರ್ 2020, 6:42 IST
Last Updated 31 ಅಕ್ಟೋಬರ್ 2020, 6:42 IST
ಸರ್ದಾರ್‌ ಪಟೇಲ್‌ ಜನ್ಮದಿನದ ಹಿನ್ನೆಲೆಯಲ್ಲಿ ಒಡಿಶಾದ ಪುರಿಯ ಕಡಲ ತೀರದಲ್ಲಿ ಕಲಾವಿದ ಸುದರ್ಶನ್‌ ಪಟ್ನಾಯಕ್‌ ರಚಿಸಿದ್ದ ಮರಳು ಕಲಾಕೃತಿ ಎಲ್ಲರ ಗಮನ ಸೆಳೆಯಿತು –ಪಿಟಿಐ 
ಸರ್ದಾರ್‌ ಪಟೇಲ್‌ ಜನ್ಮದಿನದ ಹಿನ್ನೆಲೆಯಲ್ಲಿ ಒಡಿಶಾದ ಪುರಿಯ ಕಡಲ ತೀರದಲ್ಲಿ ಕಲಾವಿದ ಸುದರ್ಶನ್‌ ಪಟ್ನಾಯಕ್‌ ರಚಿಸಿದ್ದ ಮರಳು ಕಲಾಕೃತಿ ಎಲ್ಲರ ಗಮನ ಸೆಳೆಯಿತು –ಪಿಟಿಐ    

ಕೆವಾಡಿಯಾ (ಗುಜರಾತ್‌): ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ145ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಟೇಲ್‌ ಅವರನ್ನು ಸ್ಮರಿಸಿದ್ದಾರೆ.

ಎರಡು ದಿನಗಳ ಕಾಲ ಗುಜರಾತ್‌ ಪ್ರವಾಸ ಕೈಗೊಂಡಿರುವ ಮೋದಿ, ಶನಿವಾರ ನರ್ಮದಾ ಜಿಲ್ಲೆಯ ಕೆವಾಡಿಯಾಗೆ ಭೇಟಿ ನೀಡಿದರು. ಇಲ್ಲಿ ನಿರ್ಮಾಣಗೊಂಡಿರುವ ಸರ್ದಾರ್‌ ಪಟೇಲ್‌ ಅವರ ಏಕತಾ ಪ್ರತಿಮೆಗೆ ಪುಷ್ಪಗಳನ್ನು ಸಮರ್ಪಿಸಿದರು. ಇದೇ ವೇಳೆ ಹೆಲಿಕಾಪ್ಟರ್‌ ಮೂಲಕ ಪ್ರತಿಮೆ ಮೇಲೆ ಹೂ ಮಳೆ ಸುರಿಸಲಾಯಿತು. ನಂತರ ಕವಾಯತು ಮೈದಾನದತ್ತ ಸಾಗಿದ ಮೋದಿ, ರಾಷ್ಟ್ರೀಯ ಏಕತಾ ದಿನದ ಹಿನ್ನೆಲೆಯಲ್ಲಿ ಅಲ್ಲಿ ನೆರೆದಿದ್ದವರಿಗೆ ‘ರಾಷ್ಟ್ರೀಯ ಏಕತೆಯ ಪ್ರತಿಜ್ಞೆ’ಯನ್ನು ಬೋಧಿಸಿದರು.

ಪಟೇಲ್‌ ಅವರ ಜನ್ಮದಿನವನ್ನು 2014ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ADVERTISEMENT

ಶುಕ್ರವಾರ ಮೋದಿ ಅವರು ಆರೋಗ್ಯ ವನ, ಏಕತಾ ಮಾಲ್‌, ಚಿಲ್ಡ್ರನ್‌ ನ್ಯೂಟ್ರಿಷನ್‌ ಪಾರ್ಕ್‌, ಸರ್ದಾರ್‌ ಪಟೇಲ್‌ ಜಂಗಲ್‌ ಸಫಾರಿ, ದೋಣಿ ವಿಹಾರ ಸೇರಿದಂತೆ ಒಟ್ಟು17 ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.