ADVERTISEMENT

ಮಹಾರಾಷ್ಟ್ರ ಸಿಎಂ ಆಗಿ ಫಡಣವೀಸ್‌ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ

ಪಿಟಿಐ
Published 5 ಡಿಸೆಂಬರ್ 2024, 13:10 IST
Last Updated 5 ಡಿಸೆಂಬರ್ 2024, 13:10 IST
<div class="paragraphs"><p>ಅಮೃತಾ ಫಡಣವೀಸ್‌</p></div>

ಅಮೃತಾ ಫಡಣವೀಸ್‌

   

ಮುಂಬೈ: ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಅಮಿತ್‌ ಶಾ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌ ಹಾಗೂ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು.

ADVERTISEMENT

ಉದ್ಯಮಿ ಮುಖೇಶ್‌ ಅಂಬಾನಿ,  ಅಂಬಾನಿ ಸೊಸೆ ರಾಧಿಕಾ ಮತ್ತು ಪುತ್ರ ಅನಂತ್ ಅಂಬಾನಿ, ಕುಮಾರಮಂಗಲಂ ಬಿರ್ಲಾ ಹಾಜರಿದ್ದರು. ಬಾಲಿವುಡ್‌ ತಾರೆಯರಾದ ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌, ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌, ಮಾಧುರಿ ದೀಕ್ಷಿತ್‌, ಸಂಜಯ್‌ ದತ್‌, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಕೂಡ ಹಾಜರಾಗಿದ್ದರು.

ಮಿಂಚಿದ ದೇವೇಂದ್ರ ಫಡಣವೀಸ್‌ ಪತ್ನಿ

ಫಡಣವೀಸ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರ ಪತ್ನಿ ಅಮೃತಾ ಫಡಣವೀಸ್‌ ಎಲ್ಲರ ಗಮನ ಸೆಳೆದಿದ್ದಾರೆ. ಹಳದಿ– ಬಂಗಾರ ಬಣ್ಣದ ಸೀರೆಯುಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಂದ್ರ ಅವರು ಆರು ಬಾರಿ ಶಾಸಕರಾಗಿ, ಮೂರನೇ ಬಾರಿ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಬಹಳ ಸಂತಸವಾಗಿದೆ. ಅವರ ಜವಾಬ್ದಾರಿ ಕೂಡ ಹೆಚ್ಚಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.