ADVERTISEMENT

ಪ್ರಧಾನಿ ಮೋದಿ 22ರಿಂದ ಫ್ರಾನ್ಸ್‌ ಪ್ರವಾಸ

ಪಿಟಿಐ
Published 19 ಆಗಸ್ಟ್ 2019, 20:13 IST
Last Updated 19 ಆಗಸ್ಟ್ 2019, 20:13 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಆಗಸ್ಟ್‌ 22ರಂದು ಫ್ರಾನ್ಸ್‌ಗೆತೆರಳಲಿದ್ದಾರೆ.

ಈ ಸಂದರ್ಭದಲ್ಲಿ ರಕ್ಷಣಾ ವಲಯ, ಪರಮಾಣು ಶಕ್ತಿ, ಕರಾವಳಿ ಕಾವಲು ಸಹಕಾರ ಮತ್ತು ಭಯೋತ್ಪಾದನೆ ನಿಗ್ರಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸಲು ಫ್ರಾನ್ಸ್‌ ಅಧ್ಯ ಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಗುರುವಾರ ಸಂಜೆ ಮ್ಯಾಕ್ರನ್‌ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಭೋಜನಕೂಟದಲ್ಲಿ ಪಾಲ್ಗೊಳ್ಳುವರು. ಮರು ದಿನ ಪ್ರಧಾನಿ ಎಡ್ವರ್ಡ್‌ ಚಾರ್ಲ್ಸ್‌ ಫಿಲಿಪ್‌ ಅವರನ್ನು ಭೇಟಿಯಾಗುವರು. ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವರು. 1950 ಮತ್ತು 1966ರಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನಗಳ ಅಪಘಾತದಲ್ಲಿ ಮೃತಪಟ್ಟ ಭಾರತೀಯರ ಗೌರವಾರ್ಥ ನಿರ್ಮಿಸಿರುವ ಸ್ಮಾರಕವನ್ನು ಸಹ ಅವರು ಉದ್ಘಾಟಿಸುವರು.

ADVERTISEMENT

ಫ್ರಾನ್ಸ್‌ದಿಂದ ಮೋದಿ ಅವರು ಸಂಯುಕ್ತ ಅರಬ್‌ ಸಂಸ್ಥಾನಕ್ಕೆ ಮತ್ತು ಬಹರೇನ್‌ಗೆ ಸಹ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.