ADVERTISEMENT

ಪಿಎಂಜಿಎಸ್‌ವೈ ಮಾರ್ಗಸೂಚಿಗಳು ಪರಿಸ್ಥಿತಿಗೆ ಹೊಂದುವಂತೆ ಇರಲಿ: ರಾಹುಲ್‌ ಗಾಂಧಿ

ವಯನಾಡ್‌ ಸಂಸದ ರಾಹುಲ್‌ ಗಾಂಧಿ ಪ್ರತಿಪಾದನೆ

ಪಿಟಿಐ
Published 3 ಜುಲೈ 2022, 12:47 IST
Last Updated 3 ಜುಲೈ 2022, 12:47 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಮಲಪ್ಪುರಂ: ಆಯಾ ರಾಜ್ಯಗಳ ಪರಿಸ್ಥಿತಿಗೆ ಹೊಂದಾಣಿಕೆ ಸಾಧ್ಯವಾಗುವ ರೀತಿಯಲ್ಲಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಮಾರ್ಗಸೂಚಿಗಳನ್ನು ರೂಪಿಸುವುದು ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಯನಾಡ್ ಸಂಸದ ರಾಹುಲ್‌ ಗಾಂಧಿ ಭಾನುವಾರ ಹೇಳಿದರು.

ಜಿಲ್ಲೆಯ ನೀಲಂಬೂರಿನಲ್ಲಿ ಪಿಎಂಜಿಎಸ್‌ವೈ ಅಡಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯ ಮಾರ್ಗಸೂಚಿಗಳನ್ನು ಮರುಪಶೀಲನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

‘ಈ ಸಂಬಂಧ ಕೇಂದ್ರ ಭೂ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ’ ಎಂದರು.

ADVERTISEMENT

ಆಂಬುಲೆನ್ಸ್‌ ಸೇವೆಗೂ ಅವರು ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿದರು.

ಅಲ್ಲದೇ, ಪ್ರದೇಶ ಕಾಂಗ್ರೆಸ್‌ ಸಮಿತಿವತಿಯಿಂದ ನಿರ್ಮಿಸಿರುವ ಮನೆಯನ್ನು ರಾಹುಲ್‌ ಗಾಂಧಿ ಅವರು ಒಬ್ಬ ಮಹಿಳೆಗೆ ಹಸ್ತಾಂತರಿಸಿದರು. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡಿದ್ದ ಮಹಿಳೆಗೆ ರಾಜ್ಯ ಸರ್ಕಾರ ಪುನರ್ವಸತಿಯನ್ನು ನಿರಾಕರಿಸಿತ್ತು. ಸರ್ಕಾರದ ಈ ಕ್ರಮವನ್ನು ಖಂಡಿಸಿ, ಪಕ್ಷದ ವತಿಯಿಂದ ಮನೆ ನಿರ್ಮಿಸಿ, ಮಹಿಳೆಗೆ ನೀಡಲಾಗಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.