
ಚೆನ್ನೈ: ತಮಿಳುನಾಡಿನ ಪಿಎಂಕೆಯ ಡಾ. ಅನ್ಬುಮಣಿ ರಾಮದಾಸ್ ನೇತೃತ್ವದ ಬಣವು ಬುಧವಾರ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿತು.
ರಾಜ್ಯದಲ್ಲಿ ಎನ್‌ಡಿಎ ಮುನ್ನಡೆಸುತ್ತಿರುವ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ತಮ್ಮ ಮೈತ್ರಿಯನ್ನು ಬಲಪಡಿಸಿಕೊಂಡಿದ್ದಾರೆ.
ರಾಮದಾಸ್ ಅವರು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡರು. ಬಿಜೆಪಿಯು ಸಹ ಇದೇ ಮೈತ್ರಿಕೂಟದಲ್ಲಿದೆ.
‘ಪಟ್ಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ) ನಮ್ಮ ಮೈತ್ರಿಗೆ ಸೇರ್ಪಡೆಗೊಂಡಿದೆ. ಶೀಘ್ರದಲ್ಲೇ ಮತ್ತಷ್ಟು ಪಕ್ಷಗಳು ನಮ್ಮೊಂದಿಗೆ ಬರಲಿವೆ’ ಎಂದು ಪಳನಿಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
‘ಪಿಎಂಕೆಗೆ ಎಷ್ಟು ಸ್ಥಾನಗಳನ್ನು ನೀಡಬೇಕು ಎಂಬುದನ್ನು ನಿರ್ಧರಿಸಲಾಗಿದ್ದು, ನಂತರ ತಿಳಿಸುತ್ತೇವೆ’ ಎಂದರು.
‘ಜನವಿರೋಧಿ ಆಗಿರುವ ಆಡಳಿತಾರೂಢ ಡಿಎಂಕೆ ಮೈತ್ರಿಕೂಟವನ್ನು ಮಣಿಸಲಿಕ್ಕಾಗಿಯೇ ಎನ್‌ಡಿಎ ಜೊತೆ ಕೈಜೋಡಿಸಿದ್ದೇನೆ’ ಎಂದು ಪಿಎಂಕೆ ಮುಖಂಡ ಅನ್ಬುಮಣಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.