
ಎಐ ಚಿತ್ರ
ಶಹಜಹಾನ್‌ಪುರ (ಉತ್ತರ ಪ್ರದೇಶ): ಪೊಲೀಸ್ ತಪಾಸಣೆ, ಟೋಲ್ ತಪ್ಪಿಸಲು ವ್ಯಕ್ತಿಯೊಬ್ಬರು ಮಾಡಿದ ಖತರ್ನಾಕ್ ಐಡಿಯಾವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ತಮ್ಮ ಕಾರಿನ ಮೇಲೆ ಭಾರತ ಸರ್ಕಾರ ಎಂದು ಬರೆದುಕೊಂಡು, ನಂಬರ್ ಪ್ಲೇಟ್‌ನಲ್ಲಿ ಅಶೋಕ ಲಾಂಛನವನ್ನು ಅಳವಡಿಸಿಕೊಳ್ಳುವ ಮೂಲಕ ಪೊಲೀಸ್ ತಪಾಸಣೆ ಮತ್ತು ಟೋಲ್ ತಪ್ಪಿಸಲು ಮುಂದಾಗಿದ್ದಾರೆ.
ಪೊಲೀಸ್ ತಪಾಸಣೆಯ ವೇಳೆ ಆರೋಪಿಯು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿದ್ದಾನೆ. ನಂತರ, ಪೊಲೀಸ್ ತಪಾಸಣೆ ಹಾಗೂ ಟೋಲ್ ತಪ್ಪಿಸಲು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿ ಮಾಡುವುದು ಅಕ್ರಮ ಚಟುವಟಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.