ADVERTISEMENT

ಪೋಶೆ ಕಾರು ಅಪಘಾತ: ವರದಿ ಸಲ್ಲಿಸಿದ ಆರ್‌ಟಿಒ

ಪಿಟಿಐ
Published 4 ಜೂನ್ 2024, 0:11 IST
Last Updated 4 ಜೂನ್ 2024, 0:11 IST
<div class="paragraphs"><p>ಪೋಶೆ ಕಾರು ಅಪಘಾತ</p></div>

ಪೋಶೆ ಕಾರು ಅಪಘಾತ

   

ಪಿಟಿಐ ಚಿತ್ರ

ಪುಣೆ: ನಗರದಲ್ಲಿ ನಡೆದಿರುವ ಪೋಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸ್ಥಳೀಯ ಪ್ರಾದೇಶಿಕ ಸಾರಿಗೆ ಕಚೇರಿಯು(ಆರ್‌ಟಿಒ) ಪೊಲೀಸರಿಗೆ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ADVERTISEMENT

‘ಪೋಶೆ ಕಾರು ಅಪಘಾತಕ್ಕೆ ಸಂಬಂಧಿಸಿದ ವರದಿಯನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇವೆ’ ಎಂದು ಪುಣೆ  ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂಜೀವ್‌ ಭೋರ್‌ ಹೇಳಿದ್ದಾರೆ.

ಬೆಂಗಳೂರು ಮೂಲದ ಡೀಲರ್‌ವೊಬ್ಬರು ಕಳೆದ ಮಾರ್ಚ್‌ನಲ್ಲಿ ಈ ಐಶಾರಾಮಿ ಪೋಶೆ ಟೈಕಾನ್‌ ಎಲೆಕ್ಟ್ರಿಕ್‌ ಕಾರನ್ನು ಆಮದು ಮಾಡಿಕೊಂಡಿದ್ದರು. ಬಳಿಕ ಮಹಾರಾಷ್ಟ್ರದಲ್ಲಿ ತಾತ್ಕಾಲಿಕ ನೋಂದಣಿ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪೋಶೆ ಕಂಪನಿಯ ಪ್ರತಿನಿಧಿಗಳು ಕಾರಿನ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೇ 19ರ ನಸುಕಿನಲ್ಲಿ ಇಲ್ಲಿನ ಕಲ್ಯಾಣ ನಗರ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಪೋಶೆ ಕಾರನ್ನು ಅತಿವೇಗದಿಂದ ಚಲಾಯಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು. ಅಪಘಾತ ನಡೆದ ಸಂದರ್ಭದಲ್ಲಿ, ಬಾಲಕ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.