ADVERTISEMENT

ತೈವಾನ್‌‌ ರಾಷ್ಟ್ರೀಯ ದಿನಕ್ಕೆ ಶುಭ ಹಾರೈಕೆ: ಪೋಸ್ಟರ್‌ಗಳ‌ ತೆರವು

ಪಿಟಿಐ
Published 10 ಅಕ್ಟೋಬರ್ 2020, 10:14 IST
Last Updated 10 ಅಕ್ಟೋಬರ್ 2020, 10:14 IST
ಚೀನಾ ರಾಯಭಾರ ಕಚೇರಿಯ ಸನಿಹ ಹಾಕಿರುವ ಪೋಸ್ಟರ್‌ –ಟ್ವಿಟರ್‌ ಚಿತ್ರ 
ಚೀನಾ ರಾಯಭಾರ ಕಚೇರಿಯ ಸನಿಹ ಹಾಕಿರುವ ಪೋಸ್ಟರ್‌ –ಟ್ವಿಟರ್‌ ಚಿತ್ರ    

ನವದೆಹಲಿ: ‘ಇಲ್ಲಿನ ಚೀನಾ ರಾಯಭಾರ ಕಚೇರಿಯ ಸಮೀಪ ತೈವಾನ್‌ ರಾಷ್ಟ್ರೀಯ ದಿನಕ್ಕೆ ಶುಭ ಕೋರುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ನವದೆಹಲಿ ನಗರ ಪಾಲಿಕೆಯು (ಎನ್‌ಡಿಎಂಸಿ) ಕೆಲವೇ ಗಂಟೆಗಳಲ್ಲಿ ಅವುಗಳನ್ನು ತೆರವುಗೊಳಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಬಿಜೆಪಿ ನಾಯಕ ತೇಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ ಅವರುಶಾಂತಿ ಪಥದಪಾದಚಾರಿ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಹಾಕಿದ್ದ ಈ ಪೋಸ್ಟರ್‌ಗಳ ಮೇಲೆ ‘ತೈವಾನ್‌ ಹ್ಯಾಪಿ ನ್ಯಾಷನಲ್‌ ಡೇ– ಅಕ್ಟೋಬರ್‌ 10’ ಎಂದು ಬರೆಯಲಾಗಿತ್ತು.

ರಾಷ್ಟ್ರೀಯ ದಿನ‌ದ ಹಿನ್ನೆಲೆಯಲ್ಲಿ ತೈವಾನ್‌ ಸರ್ಕಾರವು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಚೀನಾ ಸರ್ಕಾರವು ಅಕ್ಟೋಬರ್‌ 7ರಂದು ಭಾರತ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿತ್ತು.

ADVERTISEMENT

‘ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಎಲ್ಲಾ ರಾಷ್ಟ್ರಗಳು ಚೀನಾದ ‘ಏಕತಾ ಚೀನಾ’ ನೀತಿಯನ್ನು ಗೌರವಿಸಬೇಕು. ಭಾರತದ ಮಾಧ್ಯಮಗಳು ಕೂಡ ಅಲ್ಲಿನ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರಲಿವೆ ಎಂಬ ನಂಬಿಕೆ ನಮಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.