ADVERTISEMENT

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ

ಪಿಟಿಐ
Published 19 ಡಿಸೆಂಬರ್ 2022, 15:40 IST
Last Updated 19 ಡಿಸೆಂಬರ್ 2022, 15:40 IST
ಎನ್‌ಜಿಟಿ 
ಎನ್‌ಜಿಟಿ    

ನವದೆಹಲಿ: ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಇದೇ 16ರಂದು ತಾನು ನೀಡಿದ್ದ ಆದೇಶ ಮರುಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೋಮವಾರ ವಜಾಗೊಳಿಸಿದೆ.

‘5 ಸಾವಿರಕ್ಕಿಂತಲೂ ಹೆಚ್ಚು ಕೋಳಿಗಳನ್ನು ಹೊಂದಿರುವ ಫಾರಂಗಳು ಪರಿಸರ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಲ್ಲವು. ಹೀಗಾಗಿ ಇಂತಹ ಫಾರಂಗಳು ಸ್ಥಳೀಯ ಆಡಳಿತಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಎನ್‌ಜಿಟಿ ತನ್ನ ಆದೇಶದಲ್ಲಿ ತಿಳಿಸಿತ್ತು.

ಈ ಆದೇಶ ಪರಿಷ್ಕರಿಸುವಂತೆ ಕೋರಿ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಹಾಗೂ ಪೌಲ್ಟ್ರಿ ಫಾರ್ಮರ್ಸ್‌ ಆ್ಯಂಡ್‌ ಬ್ರೀಡರ್ಸ್‌ ಅಸೋಸಿಯೇಷನ್‌ ಅರ್ಜಿ ಸಲ್ಲಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.