ADVERTISEMENT

ಕಾಶ್ಮೀರದ ಕಥುವಾದಲ್ಲಿ ಪ್ರಬಲ ಸ್ಫೋಟ: ಐಇಡಿ ದಾಳಿ ಶಂಕೆ

ಪಿಟಿಐ
Published 30 ಮಾರ್ಚ್ 2023, 5:01 IST
Last Updated 30 ಮಾರ್ಚ್ 2023, 5:01 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ ಸಮೀಪದ ಕುಗ್ರಾಮವೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ.

ಮೇಲ್ನೋಟಕ್ಕೆ ಇದು ಸುಧಾರಿತ ಸ್ಫೋಟ ಎಂದು ಕಂಡು ಬರುತ್ತಿದೆ ಎಂದು ಮೂಲಗಳು ಹೇಳಿವೆ. ಡ್ರೋನ್‌ ಮೂಲಕ ಸುಧಾರಿತ ಸ್ಫೋಟಕ ಸಾಗಿಸಲಾಗಿದ್ದು, ಗಡಿ ಸಮೀಪ ತಪ್ಪಾದ ಸ್ಥಳದಲ್ಲಿ ಹಾಕಲಾಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ ರಾತ್ರಿ 9.30ರ ವೇಳೆಗೆ ಸ್ಫೋಟದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಕಥುವಾ ಎಸ್‌ಎಸ್‌ಪಿ ಶಿವದೀಪ್‌ ಸಿಂಗ್‌ ಜಮ್ವಾಲ್‌ ಹೇಳಿದ್ದಾರೆ.

ADVERTISEMENT

‌‘ಗುರುವಾರ ಬೆಳಿಗ್ಗೆ ನಾವು ಕಾರ್ಯಾಚರಣೆ ಆರಂಭಿಸಿದ್ದೇವೆ. ಘಟನೆ ಸ್ಥಳದಿಂದ ಬಾಂಬ್‌ ನಿಷ್ಕ್ರೀಯ ದಳವು ಮಾದರಿಗಳನ್ನು ಸಂಗ್ರಹಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.