ADVERTISEMENT

ಪ್ರಯಾಗ್‌ರಾಜ್‌ | ಮಾಘಿ ಹುಣ್ಣಿಮೆ: ಮಹಾಕುಂಭ ನಗರ ವ್ಯಾಪ್ತಿ ವಾಹನ ಮುಕ್ತ ವಲಯ

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ

ಪಿಟಿಐ
Published 11 ಫೆಬ್ರುವರಿ 2025, 15:42 IST
Last Updated 11 ಫೆಬ್ರುವರಿ 2025, 15:42 IST
ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಮಾಘಿ  ಹುಣ್ಣಿಮೆಯ ಅಮೃತ ಸ್ನಾನ ಮಾಡಲು ಮಂಗಳವಾರ ದೋಣಿಯಲ್ಲಿ ತ್ರಿವೇಣಿ ಸಂಗಮಕ್ಕೆ ತೆರಳಿದ ಭಕ್ತರು– ಪ್ರಜಾವಾಣಿ ಚಿತ್ರ– ತಾಜುದ್ದೀನ್ ಅಜಾದ್ 
ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಮಾಘಿ  ಹುಣ್ಣಿಮೆಯ ಅಮೃತ ಸ್ನಾನ ಮಾಡಲು ಮಂಗಳವಾರ ದೋಣಿಯಲ್ಲಿ ತ್ರಿವೇಣಿ ಸಂಗಮಕ್ಕೆ ತೆರಳಿದ ಭಕ್ತರು– ಪ್ರಜಾವಾಣಿ ಚಿತ್ರ– ತಾಜುದ್ದೀನ್ ಅಜಾದ್    

ಮಹಾಕುಂಭ್‌ನಗರ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಮಾಘಿ ಹುಣ್ಣಿಮೆ, ‘ಕಲ್ಪವಾಸ್‌’ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲಿದ್ದು, ವಾಹನಗಳ ದಟ್ಟಣೆ ನಿಯಂತ್ರಿಸಲು ಮಹಾಕುಂಭ ನಗರ ವ್ಯಾಪ್ತಿಯನ್ನು ‘ವಾಹನ ಮುಕ್ತ ವಲಯ’ವನ್ನಾಗಿ ಮಾಡಿದ್ದಾರೆ.

ಪುಣ್ಯ ನದಿಯ ತಟದಲ್ಲಿ ನಿಗದಿತ ಕಾಲ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ಧೀಕರಣ ಪ್ರಕ್ರಿಯೆಗೆ ‘ಕಲ್ಪವಾಸ್‌’ ಎಂದು ಕರೆಯಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ ‘ಕಲ್ಪವಾಸ್‌’ ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. 

ಅಂದಾಜಿನ ಪ್ರಕಾರ, ತ್ರಿವೇಣಿ ಸಂಗಮದಲ್ಲಿಯೇ 10 ಲಕ್ಷಕ್ಕೂ ಅಧಿಕ ‘ಕಲ್ಪವಾಸ್‌’ನಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಸರ್ಕಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಮಾಘ ಹುಣ್ಣಿಮೆಯಂದು ನಡೆಸುವ ಪುಣ್ಯಸ್ನಾನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯವರೆಗೆ ಇಡೀ ಮಹಾಕುಂಭ ನಗರವನ್ನು ವಾಹನ ಮುಕ್ತ ವಲಯವಾಗಿ ಮಾಡಲಾಗಿದ್ದು, ತುರ್ತು, ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.