ADVERTISEMENT

ತುಂಬು ಗರ್ಭಿಣಿಯಾಗಿದ್ದರೂ ಸದನಕ್ಕೆ ಹಾಜರಾದ ಶಾಸಕಿ: ಅಲರ್ಟ್ ಆಗಿರುವ ವೈದ್ಯರು

ಏಜೆನ್ಸೀಸ್
Published 29 ಫೆಬ್ರುವರಿ 2020, 4:09 IST
Last Updated 29 ಫೆಬ್ರುವರಿ 2020, 4:09 IST
ಶಾಸಕಿ ನಮಿತಾ ವಿಧಾನಸಭಾ ಅಧಿವೇಶನಕ್ಕೆ ಆಗಮಿಸುತ್ತಿರುವುದು
ಶಾಸಕಿ ನಮಿತಾ ವಿಧಾನಸಭಾ ಅಧಿವೇಶನಕ್ಕೆ ಆಗಮಿಸುತ್ತಿರುವುದು   
""

ಮಹಾರಾಷ್ಟ್ರ: ಸದನ ಆರಂಭವಾದರೂ ಕೆಲ ರಾಜಕಾರಣಿಗಳು ಗೈರು ಹಾಜರಾಗಿ ಗಮನ ಸೆಳೆದ ಉದಾಹರಣೆಗಳಿವೆ. ಆದರೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಾಸಕಿ ಗರ್ಭಿಣಿಯಾಗಿ ಎಂಟು ತಿಂಗಳ ತುಂಬಿದ್ದರೂ ಸದನಕ್ಕೆ ಆಗಮಿಸಿ ಎಲ್ಲರ ಗಮನಸೆಳೆದಿದ್ದಾರೆ.

ಇಲ್ಲಿನ ಬೀಡ್ ಜಿಲ್ಲೆಯ ಶಾಸಕಿ ನಮಿತಾ ಮುಂಡಾಡ (30) ಎಂಬುವರೆ ಸದನಕ್ಕೆ ಆಗಮಿಸುತ್ತಿರವವರು. ಕಾಂಗ್ರೆಸ್ ಶಿವಸೇನಾ ಮೈತ್ರಿ ಸರ್ಕಾರದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿಯೂ ಸದನಕ್ಕೆ ಹಾಜರಾಗುವುದರ ಬಗ್ಗೆ ಮಾಧ್ಯಮದವರು ಕೇಳಿದಾಗ ಬಜೆಟ್ ಅಧಿವೇಶನವೇ ನನಗೆ ಮುಖ್ಯ, ಈ ಸಮಯದಲ್ಲಿ ನಾನು ಹಾಜರಿರುವುದು ನನ್ನ ಕರ್ತವ್ಯ, ನನ್ನ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಯದಲ್ಲಿ ಭಾಗವಹಿಸಿ ಅವುಗಳನ್ನು ಪ್ರಸ್ತಾಪ ಮಾಡಬೇಕಾಗಿದೆ. ಅದಕ್ಕಾಗಿಯೇ ಆಗಮಿಸಿದೆ ಎಂದು ಹೇಳಿದ್ದಾರೆ.

ಶಾಸಕಿ ನಮಿತಾ

ಇದರಿಂದಾಗಿ ವಿಧಾನಸಭೆಯ ಹೊರಗೆ ತುರ್ತು ಚಿಕಿತ್ಸಾ ವಾಹನ, ತಜ್ಞ ವೈದ್ಯರ ತಂಡತಪ್ಪದೆ ಹಾಜರಿರುವಂತೆ ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.

ADVERTISEMENT

ಮಹಾರಾಷ್ಟ್ರದಬೀಡ್ ಜಿಲ್ಲೆಯಮೀಸಲು ಕ್ಷೇತ್ರದಿಂದ 2014ರಲ್ಲಿ ಎನ್‌‌ಸಿಪಿ ಪಕ್ಷದಿಂದಆಯ್ಕೆಯಾಗಿದ್ದ ನಮಿತಾ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.