ADVERTISEMENT

ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾದವರಿಗೆ ಕಾನೂನು ಹಕ್ಕು ತಿಳಿಸಬೇಕು: 'ಸುಪ್ರೀಂ'

ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ

ಪಿಟಿಐ
Published 12 ಮಾರ್ಚ್ 2021, 16:05 IST
Last Updated 12 ಮಾರ್ಚ್ 2021, 16:05 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಗರ್ಭಿಣಿಯಾದರೆ ಆಕೆಯ ಕಾನೂನು ಹಕ್ಕುಗಳ ಬಗ್ಗೆ ಆಕೆಗೆ ತಿಳಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ನೋಟಿಸ್‌ ಜಾರಿಗೊಳಿಸಿದೆ.

ಇಂತಹ ಪ್ರಕರಣಗಳಲ್ಲಿ 20 ವಾರಗಳಿಗೂ ಮೀರಿದ ಭ್ರೂಣವನ್ನು ಗರ್ಭಪಾತ ಮಾಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಪೀಠ ಈ ಸೂಚನೆ ನೀಡಿದೆ. ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೇಂದ್ರಕ್ಕೆ ನೀಡಿದೆ.

‘14 ವರ್ಷದ ಅತ್ಯಾಚಾರ ಸಂತ್ರಸ್ತೆ ಈಗ ಗರ್ಭಿಣಿಯಾಗಿದ್ದು, ಭ್ರೂಣ 26ನೇ ವಾರದ ಗರ್ಭಾವಸ್ಥೆಯಲ್ಲಿದೆ. ಇದನ್ನು ಗರ್ಭಪಾತ ಮಾಡಿಸಲು ನಾವು ಅನುಮತಿ ಕೇಳುತ್ತಿಲ್ಲ. ಅರ್ಜಿ ಸಿದ್ಧಪಡಿಸುವಾಗ ಅತ್ಯಾಚಾರ ಸಂತ್ರಸ್ತೆಯ ಪೋಷಕರ ನೋವು ಕಂಡಿದ್ದೇನೆ, ಆದ್ದರಿಂದ ನಾನು ಭ್ರೂಣ ಹತ್ಯೆಗೆ ಅನುಮತಿ ಕೇಳುತ್ತಿಲ್ಲ, ಇಂತಹ ಪ್ರಕರಣಗಳಲ್ಲಿ 20 ವಾರಗಳಿಗೂ ಮೀರಿದ ಭ್ರೂಣವನ್ನು ಗರ್ಭಪಾತ ಮಾಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸಬೇಕು’ ಎಂದು ಸಂತ್ರಸ್ತೆ ಪರ ವಾದಿಸುತ್ತಿರುವ ವಕೀಲ ವಿ.ಕೆ. ಬಿಜು ಪೀಠದ ಗಮನಕ್ಕೆ ತಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.