ನವದೆಹಲಿ: ₹10 ಸಾವಿರ ಮುಖಬೆಲೆಯ ಬ್ಯಾಂಕ್ ನೋಟಿನ ಮಾದರಿ ಹಾಗೂ ಪ್ರಾಚೀನ ಕಾಲದ ಎರಡು ಬದಿಯ ಗಡಿಯಾರ ಸೇರಿದಂತೆ ಒಟ್ಟು 250 ವಸ್ತುಗಳನ್ನು ರಾಷ್ಟ್ರಪತಿ ಭವನದಲ್ಲಿ ಹರಾಜಿಗೆ ಇಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಈ ಹಿಂದಿನ ರಾಷ್ಟ್ರಪತಿಗಳಿಗೆ ಉಡುಗೊರೆಯಾಗಿ ಬಂದಿದ್ದ ವಸ್ತುಗಳು ಇವುಗಳಾಗಿದ್ದು, https://upahaar.rashtrapatibhavan.gov.in/ ಪೋರ್ಟಲ್ ಮೂಲಕ ಹರಾಜು ನಡೆಯಲಿದೆ ಎಂದು ರಾಷ್ಟ್ರಪತಿ ಕಚೇರಿ ಮಾಹಿತಿ ನೀಡಿದೆ. ಆಸಕ್ತರು ಪೋರ್ಟಲ್‌ನಲ್ಲಿ ಬಿಡ್ ಸಲ್ಲಿಸಬಹುದು ಎಂದೂ ತಿಳಿಸಿದೆ.
ರಾಷ್ಟ್ರಪತಿಗಳ ಪತ್ರಿಕಾ ಉಪ ಕಾರ್ಯದರ್ಶಿ ನಾವಿಕ ಗುಪ್ತಾ ಮಾತನಾಡಿ, ‘ರಾಷ್ಟ್ರಪತಿಗಳ ಉಡುಗೊರೆ ಸಂಗ್ರಹಗಳ ಹರಾಜು ಪ್ರಕ್ರಿಯೆಯ 2ನೇ ಆವೃತ್ತಿ ಆರಂಭಗೊಂಡಿದ್ದು, ಆಗಸ್ಟ್ 31ರಂದು ಇದು ಕೊನೆಗೊಳ್ಳಲಿದೆ. 250 ವಸ್ತುಗಳನ್ನು ಹರಾಜಿಗೆ ಇಡಲಾಗಿದ್ದು, ಇವುಗಳ ಮಾರಾಟದಿಂದ ಬಂದ ಆದಾಯವನ್ನು ಮಹಿಳಾ ಮತ್ತು ಮಕ್ಕಳ ಸಬಲೀಕರಣ ಉದ್ದೇಶಿತ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.