ADVERTISEMENT

ಗೋಹತ್ಯೆ ನಿಷೇಧ: ಸುಗ್ರೀವಾಜ್ಞೆಗೆ ನಿರ್ಧಾರ

ಪಿಟಿಐ
Published 9 ಜೂನ್ 2020, 21:55 IST
Last Updated 9 ಜೂನ್ 2020, 21:55 IST
ರಾಯಚೂರಿನ ಸ್ಥಳೀಯ ಗೋವು ಜನ್ಮನೀಡಿರುವ ಥಾರಪಾರ್ಕರ್‌ ಕರು
ರಾಯಚೂರಿನ ಸ್ಥಳೀಯ ಗೋವು ಜನ್ಮನೀಡಿರುವ ಥಾರಪಾರ್ಕರ್‌ ಕರು   

ಲಖನೌ: ಗೋವುಗಳ ರಕ್ಷಣೆ ಹಾಗೂ ಗೋಹತ್ಯೆ ತಡೆಯುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ಈಸಂಬಂಧ ರೂಪಿಸಿರುವ ಕರಡು ನಿಯಮಾವಳಿಗೆ ಮಂಗಳವಾರ ಅನುಮೋದನೆ ನೀಡಿದೆ.

ಈ ಸುಗ್ರೀವಾಜ್ಞೆಯ ಪ್ರಕಾರ ಗೋಹತ್ಯೆ ಮಾಡುವವರಿಗೆ ಗರಿಷ್ಠ ಹತ್ತು ವರ್ಷ ಕಠಿಣ ಸಜೆ ಹಾಗೂ ₹5 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ.

ಈ ಅಪರಾಧಕ್ಕೆ ಮೊದಲ ಬಾರಿಗೆ ಒಂದರಿಂದ ಏಳು ವರ್ಷಗಳ ವರೆಗಿನ ಕಠಿಣ ಸಜೆ, ₹1ರಿಂದ ₹3 ಲಕ್ಷದ ವರೆಗೆ ದಂಡ ಹಾಗೂ ಎರಡನೇ ಬಾರಿ 10 ವರ್ಷಗಳ ವರೆಗೆ ಕಠಿಣ ಸಜೆ ಹಾಗೂ ₹5 ಲಕ್ಷ ದಂಡ ವಿಧಿಸಬಹುದಾಗಿದೆ.

ADVERTISEMENT

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.