ADVERTISEMENT

ಮನ್‌ ಕಿ ಬಾತ್: ದೇಶಿ ಉತ್ಪನ್ನ ಪ್ರೋತ್ಸಾಹಿಸುವಂತೆ ಪ್ರಧಾನಿ ಮನವಿ

ಪಿಟಿಐ
Published 30 ಡಿಸೆಂಬರ್ 2019, 2:00 IST
Last Updated 30 ಡಿಸೆಂಬರ್ 2019, 2:00 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯವಾಗುವವರೆಗೆ ಮುಂದಿನ ಮೂರು ವರ್ಷ ದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಈ ವರ್ಷದ ಕೊನೆಯ ರೇಡಿಯೊ ಭಾಷಣ ‘ಮನ್‌ ಕಿ ಬಾತ್’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ಸ್ಥಳೀಯ ಉತ್ಪನ್ನಗಳನ್ನು ಇತರರೂ ಬಳಸುವಂತೆ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಬರಲಿರುವ ದಶಕಗಳು ಯುವಕರದ್ದು: ಮುಂದಿನ ದಶಕಗಳು ಯುವಕರಿಗೆ ಸೇರಿವೆ ಎಂದು ಮೋದಿ ಹೇಳಿದರು.ಈ ವ್ಯವಸ್ಥೆಯಲ್ಲಿ ನಂಬುಗೆ ಇರಿಸಿಕೊಂಡಿದ್ದಕ್ಕಾಗಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹಾಗೊಂದು ವೇಳೆ ವ್ಯವಸ್ಥೆ ಸೂಕ್ತವಾಗಿ ಪ್ರತಿಕ್ರಿಯೆ ತೋರದೇ ಇದ್ದಾಗ ಅದನ್ನು ಪ್ರಶ್ನೆ ಕೂಡ ಮಾಡುವವರೇ ಈ ಯುವಜನತೆ ಎಂದರು.

ADVERTISEMENT

ಯುವಕರು ಅರಾಜಕತೆಯನ್ನು ದ್ವೇಷಿಸುತ್ತಾರೆ. ಜಾತಿವಾದ, ಸ್ವಜನಪಕ್ಷಪಾತ ಮತ್ತು ಒಬ್ಬರ ಪರವಾದ ಒಲವನ್ನು ಇಷ್ಟಪಡುವುದಿಲ್ಲ ಎಂದು ಮೋದಿ ವಿಶ್ಲೇಷಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿರೋಧ ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ ಪ್ರಧಾನಿ ಹೀಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.